ಪ್ರೀತಿ ಎಂದರೇನು?
ಪ್ರೀತಿ ಎಂದರೇನು?
ಎಷ್ಟು ಹೊಗಳಿದರೇನು?, ಎಷ್ಟು ಮೆರೆಸಿದರೇನು?,
ಎಷ್ಟು ಸಾರಿ ನಿನಗಿಷ್ಟವಾದುವನ್ನ ತಂದೊಪ್ಪಿಸಿದರೇನು?,
ಕಷ್ಟಗಳ ಒಂದೊಂದಾಗಿ ನೀ ತಂದೊಡ್ಡುತ್ತಿರಲು ಸದಾ
ನಿಷ್ಠೆಯಿಂದ ಎಲ್ಲವನು ಪಾಲಿಸಿಕೊಂಡಿರಲು ಫಲವೇನು?;
ನಿನ್ನೆದುರು ನಾನು ಬರೀ ಶೂನ್ಯವೆಂದು ಒಪ್ಪಿಕೊಳ್ಳುವ ತನಕ,
ನಿನ್ನ ಬಿಟ್ಟು ನನಗೆ ಇನ್ನು ಬದುಕಿಲ್ಲವೆನ್ನುವ ತನಕ,
ನನ್ನ ಇಷ್ಟ ಕಷ್ಟಗಳಾವುದನ್ನೂ ನೀ ಲೆಕ್ಕಿಸದೆ
ನಿನ್ನಿಷ್ಟದಂತೆಯೇ ನೀನಿರಲು ಬಯಸುವುದಾದರೆ
ಪ್ರೀತಿ ಎಂದರೇನು ಎಂಬ ಅರಿವು ನಿನಗೆ ಕಿಂಚಿತ್ತಾದರೂ
ಇರಲು ಸಾಧ್ಯವೇ ಇಲ್ಲವೆಂದು ಸಾಬೀತಾದಂತಲ್ಲವೇ?;
ನೀ ಹೇಗಿದ್ದರೂ ನಿನ್ನ ನಾನು ಪ್ರೀತಿಸುವೆನೆಂದು ಹೇಳಿದರೂ
ನಿನ್ನಂತೆಯೇ ಅನ್ಯರನ್ನೂ ನಾನು ಪ್ರೀತಿಸಬಾರದೆಂದು
ಮತ್ತೆ ಏಕೆ ನನ್ನ ಮೇಲೆ ನಿರ್ಬಂಧವನೇರುವೆ?
ಪ್ರೀತಿಯ ನೆಪದಲ್ಲಿ ಏನು ಮಾಡಿದರೂ, ಹೇಗಿದ್ದರೂ
ಎಲ್ಲವೂ ತಪ್ಪಾಗಿ ಪರಿಣಮಿಸುತ್ತಿರಲು ಕೊನೆಗೆ
ಪ್ರೀತಿಯೆಂದರೇನು ಎಂದು ನನ್ನನ್ನೇ ಪ್ರಶ್ನಿಸುವಂತಾಯಿತು.