Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Ranjtha hebbar m

Others

2  

Ranjtha hebbar m

Others

ಒಲುಮೆಯ ಹೋಳಿ ಹಬ್ಬ

ಒಲುಮೆಯ ಹೋಳಿ ಹಬ್ಬ

1 min
128


ಋದ್ಧಿಯ ಸಂಕೇತವು ಈ #Rang barse

ಹೋಳಿಯು ಅಂದದ ಹಬ್ಬವು#Rang barse

ಋತದ ಪ್ರತೀಕವು ಈ#Rang barse

ಹೋಳಿಯು ದಿವಿಜೆ ಹಬ್ಬವು #Rang barse

ಎಲ್ಲರು ಒಗತನದಿ ಆತ್ಮೀಯರಾಗಿ ಆಚರಿಸಲೆಂದು

ಬರುವ ಹಬ್ಬವು ಈ ಹೋಳಿಯ ಹಬ್ಬವು

ಕೆಂಪನೆ ಬಣ್ಣವು ಒಲುಮೆಗೆ ಕಾರಣವು

ಕೆಂಪನೆ ರಂಗ ಎರಚುತ ಆಡೋಣ ಹೋಳಿಯ

ಹಸಿರು ಬಣ್ಣವು ಮನುಜ‌ ಮತ್ತು ಧರಣಿಯ

ಅನೂಹ್ಯ ಬಾಂಧವ್ಯಗಳ ಸಂಕೇತವು 

ಹಸಿರು ಬಣ್ಣವ ಹಚ್ಚುತ ಆಡೋಣ ಹೋಳಿಯ

ಕೇಸರಿ ಬಣ್ಣವು ಧೈರ್ಯ, ಪರಿತ್ಯಾಗದ ಸಂಕೇತವು

ಕೇಸರಿ ಬಣ್ಣವ ಹಚ್ಚಿಕೊಂಡು ಆಡೋಣ ಹೋಳಿಯ

ಬಿಳಿಯ ಶುಭ್ರ, ಶ್ವೇತ ಬಣ್ಣವು ಸತ್ಯ ಮಾರ್ಗದ

ಹಾದಿಯೆಡೆಗೆ ಕೊಂಡುಯ್ಯುವ ಶಾಂತಿಯ ಸಂಕೇತವು

ಬಿಳಿ ಬಣ್ಣವ ಹಚ್ಚಿಕೊಂಡು ಆಡೋಣ ಹೋಳಿಯ

ನೇರಳೆ ಬಣ್ಣವು ಉದಾತ್ತತೆ, ಆಧ್ಯಾತ್ಮಿಕತೆ,

ಸೃಜನಶೀಲತೆ, ಘನತೆ, ನಿಸ್ಪೃಹತೆಯ ಸಂಕೇತವು

ನೇರಳೆ ಬಣ್ಣವ ಹಚ್ಚಿಕೊಂಡು ಆಡೋಣ ಹೋಳಿಯ

ನೀಲಿ ಬಣ್ಣವು ನಮ್ಮ ದೇವರಾದ ನೀಲ ಮೇಘ ಶ್ಯಾಮ

ಗೋಪಾಲ, ಗೋವಿಂದ, ಶ್ರೀ ಕೃಷ್ಣನ ಪ್ರಿಯ ಬಣ್ಣವು

ನೀಲಿ ಬಣ್ಣವ ಹಚ್ಚಿಕೊಂಡು ಆಡೋಣ ಹೋಳಿಯ

ಕಿತ್ತಳೆ ಬಣ್ಣವು ಬಹಳ ಪ್ರಕಾಶಮಾನವಾದ ಬಣ್ಣವು

ಸೃಜನಶೀಲತೆ, ಏಕಾಗ್ರತೆ, ಸಹನೆ, ಸಾಮರ್ಥ್ಯದ ಸಂಕೇತವು

ಕಿತ್ತಳೆ ಬಣ್ಣವ ‌ಹಚ್ಚಿಕೊಂಡು ಆಡೋಣ ಹೋಳಿಯ

ಆಕಾಶ ನೀಲಿ ಬಣ್ಣವು ಆಗಸದ ಸುಂದರ ಬಣ್ಣವು

ಪರಿಶುದ್ಧತೆಯ , ಪರಿಪೂರ್ಣತೆಯ ಸಂಕೇತವು

ಆಕಾಶ ನೀಲಿ ಬಣ್ಣವ ಹಚ್ಚಿಕೊಂಡು ಆಡೋಣ ಹೋಳಿಯ

ಹಳದಿ ಬಣ್ಣವು ಹದಿಬದೆಯ ಕೆನ್ನೆಗೆ ಹಚ್ಚುವ 

ಪೂಜ್ಯ ಅರಿಶಿನದ ಬಣ್ಣವು , ಶುಭದ ಸಂಕೇತವು

ಹಳದಿ ಬಣ್ಣವ ಹಚ್ಚಿಕೊಂಡು ಆಡೋಣ ಹೋಳಿಯ

ಗುಲಾಬಿ ಬಣ್ಣವು ಸುಂದರ ಆಕರ್ಷಣೀಯ‌ ಬಣ್ಣವು

ಅನಂತ ಸಂತೋಷದ, ಅನನ್ಯ ಕೃತಜ್ಞತೆಯ ಸಂಕೇತವು

ಗುಲಾಬಿ ಬಣ್ಣವ ಹಚ್ಚಿಕೊಂಡು ಆಡೋಣ ಹೋಳಿಯ

ಕಂದು ಬಣ್ಣವು ನಂಬಿಕೆ ಮತ್ತು ವಿಶ್ವಾಸಕ್ಕೆ ಪೂರಕವಾದ

ಬಣ್ಣವು, ಸ್ಥಿರತೆ ,ಆತ್ಮ ವಿಶ್ವಾಸದ ಹೆಮ್ಮೆಯ ಸಂಕೇತವು

ಕಂದು ಬಣ್ಣವ ಹಚ್ಚಿಕೊಂಡು ಆಡೋಣ ಹೋಳಿಯ

ಬಹುಳ ಬಣ್ಣವು ಶನಿ ಮಹಾತ್ಮನ ಪ್ರಿಯ ಬಣ್ಣವು

ಅಧಿಕಾರ, ಹಿರಿತನ, ಸಾಧನೆಯ ಸಂಕೇತವು

ಬಹುಳ ಬಣ್ಣವ ಹಚ್ಚಿಕೊಂಡು ಆಡೋಣ ಹೋಳಿಯ

ಎಲ್ಲಾ ಬಣ್ಣಗಳ ಸೇರಿಸಿ ಒಟ್ಟುಗೂಡಿಸಿ ಲೇಪಿಸಿಕೊಂಡು

ಸಹವರ್ತಿಗಳ ಜೊತೆಯಲಿ ಆಡೋಣ ಹೋಳಿಯ

ಸಮ್ಮಿಶ್ರಣ ಮಾಡಿ ವಿವಿಧ ವರ್ಣಗಳನು

ಒಡನಾಡಿಗಳ ಒಡಗೂಡಿ ಆಡೋಣ ಹೋಳಿಯ

ಆಡೋಣ ಹೋಳಿ ಬಣ್ಣದ ಹೋಳಿ #Rang barse

ಆಡೋಣ ಹೋಳಿ ರಂಗಿನ ಹೋಳಿ#Rang barse


Rate this content
Log in