ನೆನಪು
ನೆನಪು

1 min

10
ಮರಳಿ ಬಾರದೂ ಮತ್ತೆ ದೊರೆಯದೂ
ಕಳೆದ ಆ ಕ್ಷಣಗಳು, ಸಮಯ ಅನುಚಿತ...
ಹಲವು ರಗಳೆ ಬಹಳ ಸು-ಗಳೆ
ಕಣ್ಣರೆಪ್ಪೆಗೆ ಕಟ್ಟಿದಂತಿದೆ,
ನೆನಪುಗಳ ಮುದ್ರಿಕೆಗಳು ಅದ್ಭುತ...
ಮರೆಯಲಾಗದ ಮಧುರ ಕ್ಷಣಗಳ
ಕಳೆದ ಸುವರ್ಣ ಸಮಯದ,
ಜೋಳಿಗೆಯಲಿ ನೆನಪಿನ ಕೂಸುಗಳಿಗೆನ್ನ ಮತ...
ಪ್ರಾ(ಅ)ಧ್ಯಾಪಕರ ನೆನಪಲಿ
ನಡೆದು ಬಂದ ಹಾದಿಯಲಿ
ಸ್ನೇಹಿತರ ಮಾತಿನ ನೆನಪಲಿ
ತರುವುದು ಕಿರು ನಗೆ ನಿಯತ...