ನಾಳಿನ ನಾಯಕರು
ನಾಳಿನ ನಾಯಕರು
1 min
313
ಎಳೆ ಮೊಗಗಳಲಿ ಅರಳುತಿದೆ ನಗೆಹೊನಲು
ಬಿಡಿಬಿಡಿ ಮಲ್ಲಿಗೆಯ ಮೊಗ್ಗುಗಳ ಗಮಲು
ಹರಡಿ ತುಳುಕಿಸಿದೆ ಆನಂದದ ಅಮಲು
ನಾವುನೀವದಕೆ ಎರೆಯೋಣ ಮಮತೆ ಹಾಲು.
ನವಚೇತನ ನವಭಾವನೆ ನವೋಲ್ಲಾಸದಲಿ
ಚಿಗುರೊಡೆವ ಎಳೆ ತರಳೆಗಳ ಕಂಗಳಲಿ
ಹೊಳೆವ ಮುಗ್ದ ಚೆಲುವಿಗೆ ಒಲವಲಿ
ಅಕ್ಕರೆಯ ತೋರಿ ಜೀವಜೇನಾಗಲಿ.
ಮುಂಬರುವ ಕಾಲಗಟ್ಟಕೆ ಭದ್ರಬೂನಾಧಿ
ಇವರೇ ನಾಡಿನ ನಾಯಕರೆಂಬ ಸತ್ಯದಿ
ಜತನದಲಿ ಕಾಪಿಟ್ಟು ತಿದ್ದಿ ಸಲಹಿದಲಿ
ಇವರಾಗುವರು ಧೀಮಂತ ಪ್ರಭುಗಳು...
