ಮಸಾಲೆ
ಮಸಾಲೆ
ನಿಯಮಿತವಾಗಿ ಬಳಸದಿದ್ದರೆ ಉಪ್ಪು,
ಸಾವೇ ಬರಬಹುದು ಆಗುವುದಕ್ಕಿಂತ
ಮುಂಚೆನೇ ಮುಪ್ಪು.
ಅರಮನೆಯಲ್ಲೇ ನೋಡು, ಗುಡಿಸಲಲ್ಲೇ ನೋಡು, ಅರಿಶಿಣವಿರದ ಮನೆ ಸಿಕ್ಕಿತೇ ಒಮ್ಮೆ ನೀ ಹೇಳು...
ರೋಗಕ್ಕೂ ಮದ್ದು ಅರಿಶಿಣ
ಗಾಯಕ್ಕೂ ಮದ್ದು ಅರಿಶಿಣ
ಅರಿಶಿಣವಿಲ್ಲದ ಅಡುಗೆ ಮನೆ,
ಖೈದಿಯಿಲ್ಲದ ಸೆರೆಮನೆ,
ತೆಗೆದರೆಷ್ಟು, ಮುಚ್ಚಿದರೆಷ್ಟು (!?)
ಲಾಭವಿಲ್ಲದ ಮೇಲೆ ನಷ್ಟವೇ ಹೆಚ್ಚು !
ದಿನವೂ ಊಟಕ್ಕೇ ಬೇಕು ಮಸಾಲೆಭರಿತ ಸಾಂಬಾರು
ಅದುವೇ ಉಪ್ಪು, ಅರಿಶಿಣ, ಜೀರಿಗೆ,
ಮೆಣಸು, ಚಕ್ಕೆ, ಸಾಸಿವೆ, ಲವಂಗ.
ಇವೆ ಮಸಾಲೆ ಪದಾರ್ಥ
ಇವುನ್ನ ಉಪಯೋಗಿಸಿ ಮಾಡಿದರೆ
ಸಾಂಬಾರಿಗೆ ಒಂದು ಅರ್ಥ
ಚಟ ಪಟ ಎಂದರೆ ಸಾಸಿವೆ ,
ಎಣ್ಣೆ ಚೆನ್ನಾಗಿ ಕಾದಿದೆ ಎಂದರ್ಥ.
ಘಮ ಘಮ ಅಂದರೆ ಜೀರಿಗೆ,
ಎಣ್ಣೆ ಲಿ ಬೆರೆತಿದೆ ಎಂದರ್ಥ.
ವರ್ಣ ಚೆನ್ನಾಗಿದೆ ಅಂದರೆ,
ಅರಿಶಿಣ ಎಲ್ಲದರಲ್ಲೂ ಕೂಡಿದೆ ಎಂದರ್ಥ.
ತಿನ್ನುವಾಗ ರುಚಿಸಿದರೆ ಸಾಂಬಾರ್
ಮಸಾಲೆ ಪದಾರ್ಥ ಕೂಡಿದೆ ಅಂತೆ ಸೂಪರ್