ಮಳೆಯ ದನಿ
ಮಳೆಯ ದನಿ

1 min

80
ತಂಪಾಯಿತು ಮಳೆ ಬಂದು
ಹೋದ ಮೇಲೆ ಸಂಜೆಗೆ
ಮೋಡಗಳಿಲ್ಲದ ಆಗಸವ
ನೋಡುವುದೇ ಚಂದ ಹೂವಿಗೆ
ಹಾಡೊಂದ ಗುನುಗಬೇಕೆನಿಸುತ್ತದೆ
ಹಸಿರೆಲೆಯ ಮರೆಯಲಿ ಕುಳಿತ
ಕಾಡು ಹಕ್ಕಿಗೆ
ಪಿಸುದನಿಯಲಿ ಮಾತನಾಡುತಿವೆ
ಬಣ್ಣದ ಚಿಟ್ಟೆಗಳು
ಬಂದು ಹೋದ ಮಳೆಯ ಬಗೆಗೆ
ಎಲೆಯ ಮೇಲೆ ಕುಳಿತ
ಮಳೆಯ ಹನಿಗಳ ನೋಡಿ
ಹೇಳಿತು ಪುಟ್ಟ ಇಣಚಿಯೊಂದು
ಇದೆ ಸವಿ ದನಿಯೊಂದು ಮಳೆಗೆ