ಮಕ್ಕಳ ಮನಸ್ಸು
ಮಕ್ಕಳ ಮನಸ್ಸು

1 min

72
ಮಕ್ಕಳ ಪ್ರಶ್ನೆ ಸಾವಿರ
ಇರದು ನಮ್ಮಲ್ಲಿ ಉತ್ತರ
ಮುಗ್ಧತೆಯ ಪ್ರತ್ಯುತ್ತರ
ಇರು ನೀ ಹತ್ತಿರ ಹತ್ತಿರ
ನಗುವೇ ಮಗುವಿಗೆ ಚಂದ
ನಗುವೇ ಮಗುವಿಗೆ ಅಂದ
ಎಲ್ಲರ ಮನಸ್ಸ ಕದ್ದ ಕಂದ
ಎಲ್ಲರ ಕನಸ್ಸ ಗೆದ್ದ ಮುಕುಂದ
ನಿನ್ನ ನಗುವಿಗೆ ಚಂದಿರ ನಾಚಿದ
ನಿನ್ನ ಮಾತಿಗೆ ಅವ ತಲೆ ಬಾಗಿದ
ಮಾತಲ್ಲೇ ಮರುಳು ಮಾಡುವೆ
ಎಲ್ಲರ ನಗುವಿಗೆ ನಗುವಾಗುವೆ