ಮಾಯಾ ಪೆಟ್ಟಿಗೆ
ಮಾಯಾ ಪೆಟ್ಟಿಗೆ
1 min
137
ಬೆರಳ ತುದಿಯಲ್ಲಿದೆ ಈ ದಿನ ಜಗತ್ತು
ಅದು ತಂದಿದೆ ನಮಗೆ ಸಂಪತ್ತು-ಆಪತ್ತು
ಮುಂದೆ ಇದರಿಂದಲೇ ಆಗುವುದಾ ವಿಪತ್ತು?
ಒಳ್ಳೆಯ ವ್ಯಕ್ತಿಗೆ ಬಳಸಿದ ನೀವು ಯಾವತ್ತೂ
ಮುಂಜಾನೆ ಎದ್ದು ನೋಡುವುದೇ ಇದರ ವದನ
ಸುಲಭ ಮಾಡುತ್ತಿದೆ ನಾವು ಕುಳಿತಲ್ಲೇ ಜೀವನ
ಎಲ್ಲೆಲ್ಲೂ ನೋಡಿದರೂ ಇದರದೇ ಮಾಯಾಲೋಕ
ಸೃಷ್ಟಿಸುತ್ತದೆ ಅದು ಇಲ್ಲೇ ಸ್ವರ್ಗ ನರಕ
ಅತಿಯಾದರೆ ಅಮೃತವೂ ವಿಷ
ಅತಿಯಾಗಿ ನೋಡಿದರೆ ಆರೋಗ್ಯಕ್ಕೆ ವಿಷ
ತಿಳಿ ತಿಳಿ ನೀ ಈ ವಿಷಯ
ಬಗೆಹರಿಸುವ ನಿನ್ನ ಮನದ ಸಂಶಯ
