ಕಪ್ಪು- ಬಿಳುಪು
ಕಪ್ಪು- ಬಿಳುಪು

1 min

716
ನಾವು ಹಿಡಿದ ಮೊದಲ ಫಲಕ ಕಪ್ಪು
ಅದರ ಮೇಲೆ ಬರೆದ ಬಳಪ ಬಿಳುಪು
ಅಂದ ಹೆಚ್ಚಿಸಲು ಕಣ್ಣಿಗಚ್ಚಿದ ಕಾಡಿಗೆ ಕಪ್ಪು
ಹಸಿವಾದಾಗ ಕುಡಿದ ತಾಯಿಯ ಹಾಲು ಬಿಳುಪು
ಪ್ರಕೃತಿಯ ವಿಸ್ಮಯ ಅಮಾವಾಸ್ಯೆ ಕಪ್ಪು
ಅಂತದೇ ವಿಸ್ಮಯ ಹುಣ್ಣಿಮೆ ಬಿಳುಪು
ಮಿಂಚಿದ ಕೋಲ್ಮಿಂಚಿನ ಬಣ್ಣ ಬಿಳುಪು
ಮಿಂಚಿನ ಅಂದ ಹೆಚ್ಚಿಸಿದ ಕಾರ್ಮೋಡ ಕಪ್ಪು
ಕಣ್ಣು ಈ ಜಗದ ಅದ್ಭುತ ಸೃಷ್ಟಿ
ಕಪ್ಪು-ಬಿಳುಪು ಒಟ್ಟಿಗಿದ್ದರೆ ಆ ಕಣ್ಣಿಗೆ ದೃಷ್ಟಿ!