ಕನ್ನಡ ರತ್ನ
ಕನ್ನಡ ರತ್ನ
1 min
121
ವಿಶ್ವೇಶ್ವರಯ್ಯರ ಜನುಮದಿನದ ಸಡಗರ
ನಿಮ್ಮ ಹೆಗ್ಗುರುತಿಗೆ ಸಾಕ್ಷಿ ಕೃಷ್ಣರಾಜಸಾಗರ
ದಿವಾನರಾಗಿದ್ದಾಗ ಆಯ್ತು ಕರುನಾಡು ಶೃಂಗಾರ
ಮೂಡಿತು ಬಯಲ ತುಂಬಾ ಹಸಿರ ಮಡಿಲ ಮಂದಿರ
ಕನ್ನಡನಾಡಿನ ಕೀರ್ತಿಪತಾಕೆ ಹಾರಿಸಿದ ಹೆಗ್ಗಳಿಕೆ
ಹೊಸ ಹೊಸ ತಂತ್ರಜ್ಞಾನಕ್ಕೆ ಸಾಕ್ಷಿ ನಿಮ್ಮ ಬತ್ತಳಿಕೆ
ಕನ್ನಡಿಗರು ಮರೆಯುವಂತಿಲ್ಲ ನಿಮ್ಮ ಸಾಧನೆ
ನಾವು ಮರೆಯುವಂತಿಲ್ಲ ನೀವು ಕೈಗೊಂಡ ಯೋಜನೆ
ಭಾರತ ರತ್ನ ಪಡೆದ ಹೆಮ್ಮೆಯ ಕನ್ನಡಿಗ
ಶತಮಾನ ಕನ್ನಡ ನಾಡ ಕಂಡ ಹಿರಿಮಗ
ಹಚ್ಚಿರುವಿರಿ ಈ ನಾಡಲ್ಲಿ ಹೊಸತನದ ದೀಪ
ಅದು ಇಂದಿಗೂ ಬೆಳಗುತ್ತಿದೆ ಆ ನಂದಾದೀಪ
