Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Ranjtha hebbar m

Others

1  

Ranjtha hebbar m

Others

ಕಾಮನ ಹಬ್ಬ( ಹೋಳಿ ಹಬ್ಬ)

ಕಾಮನ ಹಬ್ಬ( ಹೋಳಿ ಹಬ್ಬ)

1 min
125


ಕಾಮನ ಹಬ್ಬದ ಪುರಾಣ 

ಕಥೆಯ ಕೇಳಿರಿ ಎಲ್ಲಾ 

ಹೋಳಿ ಹಬ್ಬದ ಹಿಂದಿನ

ತ್ಯಾಗದ ಕಥೆಯ ಕೇಳಿರಿ ಎಲ್ಲಾ

#Rang barse ಹೋಳಿ ಹಬ್ಬದ

ಪೌರಾಣಿಕ ಕಥೆಯ ತಿಳಿಯಿರಿ ಎಲ್ಲಾ

#Rang barse ಬಣ್ಣದ ಹಬ್ಬದ ಹಿಂದಿನ 

ತಾರಾಕಾಸುರನೆಂಬ ಕ್ರೂರಿ ರಕ್ಕಸನು

ಬ್ರಹ್ಮನ ವರಬಲದಿಂದ ಸೊಕ್ಕಿ

ಲೋಕದೊಳಗೆ ಮೆಮೆರೆಯತೊಡಗಿದನು

ಶಿವನ‌ ತನಯನದ ಮಾತ್ರ ತನ್ನಯ

ವಧೆಯಾಗಲಿ ಎಂದು ವರ ಪಡೆದಿದ್ದ ರಕ್ಕಸನು

ಈ ಅಸುರನ ಉಪಟಳ ತಾಳಲಾರದೆ 

ಸುರರೆಲ್ಲ ಇವನ ಸಂಹಾರಕ್ಕೆ ಉಪಾಯ ಮಾಡಿದರು

ಮನಸಿಜ ಕಾಮದೇವನ ಮೊರೆ ಹೋದರು

ತತ್ಫಲವಾಗಿ ತನ್ನ ನಿರ್ನಾಮದ ಅರಿವಿದ್ದರು

ಲೋಕದ ಕಲ್ಯಾಣಕ್ಕಾಗಿ,ಅಸುರನ ನಾಶಕ್ಕಾಗಿ

ಶಿವನು ಸತಿ ಶಿವೆಯೊಡನೆ ತಪಸ್ಸು ಮಾಡುತ್ತಿದ್ದಾಗ

ಮನ್ಮಥನು ಹೂಬಾಣದಿಂದ ಶಂಕರನ ಬಡಿದೆಬ್ಬಿಸಿದನು

ತಪೋಭಂಗವಾಗಿ ಕೋಪಗೊಂಡ ಬೊಲೇನಾಥನು

ಮೂರನೆ ಕಣ್ಣನು ಬಿಟ್ಟು ರತೀಶನ ಭಸ್ಮ ಮಾಡಿದನು

ಕಾಮನ ಪ್ರಿಯ ಸತಿ ರತಿ ದೇವಿಯು ಪತಿಯ

ಭಿಕ್ಷೆಯನು ಕೇಳುತ್ತಾ ಕಣ್ಣೀರಿಡುತ್ತಾ ಬೇಡಿದಳು

ಅಂಗಜನು ನಿನ್ನ ಕಣ್ಣಿಗೆ ಮಾತ್ರ ಸಶರೀರಿಯಾಗಿ

ಕಾಣುವನು ಎಂಬ ವರವನು ಆಕೆಗೆ ಹರನು ನೀಡಿದನು.

ಜಗತ್ತಿನ ಹಿತಕ್ಕಾಗಿ ಕಂದರ್ಪನು ಅನಂಗನಾದ ದಿನವನ್ನು

ಕಾಮನ ಹುಣ್ಣಿಮೆ ಹೋಳಿ ಹಬ್ಬವಾಗಿ ಆಚರಿಸುವರು.


#Rang barse ಹೋಳಿ ಹಬ್ಬದ ಪುರಾಣ 

ಕಥೆಯ ಕೇಳಿರಿ ಎಲ್ಲಾ 

#Rang barse ಹೋಳಿ ಹಬ್ಬದ ಹಿಂದಿನ

ಭಕ್ತ ಪ್ರಹ್ಲಾದನ ಕತೆಯ ಅರಿಯಿರಿ ಎಲ್ಲಾ

ತಾನೇ ದೇವರು ತಾನೇ ಜಗದ

ರಕ್ಷಕ ಎಂಬ ಭ್ರಮೆಯಲ್ಲಿದ್ದ ಒಬ್ಬ

ದೈತ್ಯರಾಜ ಹಿರಣ್ಯ ಕಶಿಪು ಎಂಬುವನು

ಇವನ ಸುತ ಪ್ರಹ್ಲಾದನು ಶ್ರೀ ಹರಿಯೇ

ಜಗನ್ನಿಯಾಮಕ ಎಂದನು ಹಾಡಿ ಹೊಗಳಿದನು

ಅದನು ನೋಡಿ ಸಹಿಸದ ಹಿರಣ್ಯ ಕಶಿಪು

ಹೆತ್ತ ಮಗನನ್ನೇ ಕೊಲ್ಲಲು ಸಂಚು ಹೂಡಿದನು

ಕೊಲ್ಲಲು ವಿಧ ವಿಧ ಪ್ರಯತ್ನಗಳನ್ನು ಮಾಡಿದನು

ಕೊನೆಗೆ ಸೋತು ತನ್ನ ತಂಗಿ ಹೋಳಿಕಾಳ

ಅಗ್ನಿಯ ರಕ್ಷಣೆಯ ವರಬಲದಿಂದ ಸಹಾಯ ಪಡೆದನು

ಅಣ್ಣನ ಆಜ್ಞೆಯ ಮೀರದ ತಂಗಿ ಒಪ್ಪಿದಳು

ಬಾಲ ಪ್ರಹ್ಲಾದನನ್ನು ಹೊತ್ತುಕೊಂಡಳು

ಅಗ್ನಿಕುಂಡದಲ್ಲಿ ಹೋಗಿ ಬಾಲಕನೊಂದಿಗೆ ಕುಳಿತಳು

ಆಗ ಭಕ್ತ ಪ್ರಹ್ಲಾದ ಹರಿಯ ಜಪ ಮಾಡಿದನು

ಹೋಳಿಕಾ ಬೆಂಕಿಯಲ್ಲಿ ದಹನವಾದಳು

ಭಕ್ತ ಪ್ರಹ್ಲಾದನು ಹರನ ಕೃಪೆಯಿಂದ 

ಪವಾಡ ಸದೃಶ ರೀತಿಯಲ್ಲಿ ಪಾರಾದನು

ಹೋಳಿಕಾಳ ದಹನವಾದ ದಿನವನ್ನು

ಹೋಳಿ ಹಬ್ಬವನಾಗಿ ಆಚರಿಸಲಾಯಿತು

ಹೋಳಿ ಹಬ್ಬದ ಎರಡು ಪೌರಾಣಿಕ ಕತೆಗಳ

ಸಂದೇಶವು ಒಂದೇ ಅರಿಷಡ್ವರ್ಗಗಳನ್ನು ಸುಡುವುದು

ಅಸುರೀ ದುಷ್ಟ ಶಕ್ತಿಗಳ ನಿರ್ನಾಮದ ದ್ಯೋತಕವು

ಇಂಥಹ ಅಮೂಲ್ಯ ಸಂದೇಶಗಳ ಸಾರುವ

ಕೆಡುಕಿಗೆ ಯಾವತ್ತು ಜಯವಿಲ್ಲ ಎಂಬ ಪಾಠವ

ಸರ್ವರಿಗೂ ತಿಳಿಸುವ ಹಬ್ಬವು ಹೋಳಿಯ ಹಬ್ಬ#Rang barse


Rate this content
Log in