ಜೊತೆಯಲ್ಲಿ ಕೂತು ಊಟ
ಜೊತೆಯಲ್ಲಿ ಕೂತು ಊಟ
1 min
117
ಜೊತೆಯಲ್ಲಿ ಕೂತು ಊಟ
ಜೊತೆಯಲ್ಲಿ ಕಲಿತೆವು ಪಾಠ
ದಿನನಿತ್ಯ ಕ್ಯಾಂಪಸ್ನಲ್ಲಿ ಓಡಾಟ
ಗ್ರಂಥಾಲಯದಲ್ಲಿ ಪುಸ್ತಕಕ್ಕೆ ಹುಡುಕಾಟ
ಕಾಲೇಜಿನಿಂದ ಮಾಲ್ಗಳಿಗೆ ಅಲೆದಾಟ
ಗೆಳೆಯರೊಂದಿಗೆ ಕೆಲವೊಮ್ಮೆ ಗುದ್ದಾಟ
ಇನ್ನೂ ಅದು ಹೆಚ್ಚಾದರೆ ಹೊಡೆದಾಟ
ಶಿಕ್ಷಕರಿಗೆ ಕೊಟ್ಟ ಕಾಟ
ಅವರು ಕೊಟ್ಟ ಮಾತಿನ ಏಟ
ಪರೀಕ್ಷೆಯ ದಿನ ಓದದೆ ಪರದಾಟ
ತೆರೆಯಿತು ಮನದಲ್ಲಿ ನೆನಪಿನ ಪುಟ
ಅದು ದಾರ ವಿಲ್ಲದ ಗಾಳಿಪಟ
