STORYMIRROR

Gireesh pm Giree

Others Children

1  

Gireesh pm Giree

Others Children

ಹಕ್ಕಿಯ ಅಳಲು

ಹಕ್ಕಿಯ ಅಳಲು

1 min
103

ಹಾಡು ಕೇಳಲು ಯಾರಿಲ್ಲ ಇಲ್ಲಿ ಸಂಗಡಿಗರು

ಬರೀ ಸ್ಮಶಾನ ಮೌನವೇ ಕಾಣುವುದು ಸುತ್ತೂರು

ಮಾನವ ಮಾಡಿದ ಪಾಪ ಕಾರ್ಯಕ್ಕೆ ಪ್ರಕೃತಿ ಕೊಟ್ಟಿತ್ತು ಸರಿ ಉತ್ತರ

ಆದರೂ ನಾನೇನು ತಪ್ಪು ಮಾಡಿದೆ ಹೇಳು ಮುರಹರ


ಬಾಯಾರಿ ದಿನಗಳೇ ಕಳೆದಿದೆ

ಹೊಟ್ಟೆಗೆ ಕಾಳಿಲ್ಲದೆ ಹಸಿವು ಹಿಂಡುತ್ತಿದೆ

ವರುಣದೇವ ಬೇಡ ಮುನಿಸು

ಶಿವಶಿವಾ ಬೇಗನೆ ಮಳೆಯ ಧರೆಗೆ ಕರುಣಿಸು


ಬಿಸಿಲ ಬೆಕ್ಕಿಗೆ ಕಾದಿದೆ ಸಕಲ ಜೀವಚರಗಳು

ಆರಿದೆ ಬತ್ತಿದೆ ಸದಾ ಹರಿಯುವ ಜೀವನದಿಗಳು

ಬರಿದಾಗಿದೆ ನನ್ನಂಥವರ ಬಾಳು ಹಾಳು

ಕ್ಷಣ ಪ್ರತಿಕ್ಷಣವೂ ಹೆಚ್ಚುತ್ತಿದೆ ಆಕ್ರಂದನ ಗೋಳು


ಬರಸಿಡಿಲು ಮಾರಿ ನಿನಗೇಕೆ ಕರುಣೆ ಇಲ್ಲವೇ

ನನ್ನ ಆಕ್ರಂದನ ದ್ವನಿಯು ನಿನಗೆ ಕೇಳುವುದಿಲ್ಲವೇ

ಅನುಗ್ರಹಿಸು ಆಶೀರ್ವದಿಸು ಮೇದಿನಿಯ

ಹರೆಸು ಸುಖವ ಒರೆಸು ಕಂಬನಿಯ


Rate this content
Log in