STORYMIRROR

Lakumikanda Mukunda

Children Stories Tragedy Inspirational

4  

Lakumikanda Mukunda

Children Stories Tragedy Inspirational

ಎಲ್ಲಿದೆ ನಂಬಿಕೆ?

ಎಲ್ಲಿದೆ ನಂಬಿಕೆ?

1 min
389

ನಂಬಿಕೆಯೆಂಬುದು ಕುಂದಿ ಹೊಂಟಿದೆ

ಈ ಜಗದಲ್ಲಿ ಈಗೀಗ ಏಕೋ ಗೊತ್ತಿಲ್ಲ

ವಿಶ್ವಾಸವೇ ಉಸಿರನ್ನು ಕೊಲ್ಲುತ್ತಿದೆ ಈಗ

ಜಗತ್ತು ಹೀಗೇಕೆ ಬದಲಾಯ್ತೋ ಗೊತ್ತಿಲ್ಲ...


ವೈಧ್ಯೋ ನಾರಾಯಣ ಹರಿ ಎಂದು

ರೋಗಿಯು ವೈದ್ಯನನ್ನೆ ನಂಬುತ್ತಾನೆ 

ವಿಧ್ಯಾರ್ಥಿಯೊಬ್ಬ ಕಲಿಯುತ್ತಾನೆ

ಶಿಕ್ಷಕ ಮೇಲಿನಪಾರ ನಂಬಿಕೆಯಿಂದ


ವಿಶ್ವಾಸಘಾತುಕರಿದ್ದಾರೆ ಜಗದಿ ಎಲ್ಲೆಲ್ಲೂ

ನಂಬಿಸಿ ಮತ್ತೆ ಕತ್ತು ಕೊಯ್ಯುತ್ತಾರೆ 

ಹೆದರದಿರು ಎದುರಿಸು ಜಗತ್ತನ್ನು ಮುನ್ನೆಡೆ

ನಿನ್ನ ಮೇಲೆ ನಿನಗೆ ಆತ್ಮವಿಶ್ವಾಸವಿರಲಿ


ನಂಬಿಕೆ ಬಲವಾಗಲು ಹೋರಾಡು

ನಿತ್ಯ ಕರ್ಮ ನಿನ್ನದೆ ಹೊಣೆಯಾಗಲಿ

ಸತ್ಯ ಮಾರ್ಗ ಎಂದಿಗೂ ಬಿಡದಿರು

ನಂಬಿಕೆ ನಿನ್ನಲ್ಲಿದ್ದರೆ ವಿಜಯವು ನಿನ್ನದೆ


Rate this content
Log in