STORYMIRROR

Jyothi Baliga

Others

4  

Jyothi Baliga

Others

ದೂರವಾಣಿ

ದೂರವಾಣಿ

1 min
22.9K

ಮನೆಗೊಂದು ಸ್ಥಿರ ದೂರವಾಣಿ

ಅಪರೂಪಕ್ಕೊಮ್ಮೆ ಬರುತ್ತಿದ್ದ ಭಾವಿಪತಿಯ ಕರೆ

ಜೋಡಿಹಕ್ಕಿಗಳ ಪಿಸುಮಾತುಗಳ ಕೇಳಲು

ಸೇರುತ್ತಿದ್ದರು ತಮ್ಮ ತಂಗಿಯಂದಿರು


ಮನಬಿಚ್ಚಿ ಮಾತನಾಡಲಾಗದೆಂಬ ಸಂಕಟ

ಕದ್ದುಮುಚ್ಚಿ ಮಾತನಾಡುವ ವಧುವಿನ ಪರದಾಟ

ವರನಿಂದ ತುಂಟ ಮಾತುಗಳ ಚೆಲ್ಲಾಟ 

ಮನೆಯವರು ಆಲಿಸುವರೊ ಎಂಬ ಒದ್ದಾಟ


ವಿವಾಹದ ಬಳಿಕ ತವರಿನಿಂದ ಮೊದಲ ಕರೆ

ನೂರಾರು ಕಿಮಿ ದೂರದಲ್ಲಿರುವ ತಾಯಿಯ ಸ್ವರ

ಅತ್ತೆಯ ಎದುರಿನಲ್ಲಿ ಹೇಳಲಾಗದ ಗಂಡನ ಮನೆಯ ವ್ಯಥೆ

ಧ್ವನಿಯಿಂದಲೇ ತಿಳಿದಳು ತಾಯಿ ಮಗಳ ಕಥೆ


ಪ್ರೇಮಿಗಳ ಸಮಾಗಮ, ನೋವು ನಲಿವಿನ 

ಕಷ್ಟ ಸುಖಗಳ ತಿಳಿಸುತ್ತಿದ್ದ ಸ್ಥಿರ ದೂರವಾಣಿಯಿಂದು ತಟಸ್ಥವಾಗಿದೆ

ಮೊಬೈಲ್ ಎಂಬ ಮಾಯಾಂಗನೆಯಿಂದ

ಎಲ್ಲವೂ ಮಾಯವಾಗಿದೆ


ಹುಟ್ಟುಹಬ್ಬ , ಹಬ್ಬ ಹರಿದಿನಗಳಿಗೆ ಶುಭವ ಕೋರಲು

ದೇಶ ವಿದೇಶಗಳ ವಿಚಾರ ತಿಳಿಯಲು

ಸ್ನೇಹ ಹಸ್ತ ಚಾಚಲು, ಪ್ರೇಮ ಸಂದೇಶ ರವಾನಿಸಲು ಬಂದಿಹಳು ಜಂಗಮವಾಣಿ


ಗಿಜಿಗುಟ್ಟುವ ಸಂದೇಶಗಳು ಸ್ಪಾರ್ಷಿಕ ಪರದೆಯಲ್ಲಿ

ಪ್ರೀತಿ ಪ್ರೇಮ ಮಾನವೀಯ ಸಂಬಂಧಗಳು 

ಸಂಚಾರಿ ದೂರವಾಣಿಯಂತೆ ಅಲೆದಾಟದಲ್ಲಿ

ಕಾಲಕ್ಕೆ ತಕ್ಕಂತೆ ಕೋಲ ಇನ್ನೂ ಬದುಕೆಲ್ಲವೂ ಜಂಗಮವಾಣಿಯ ಆಪ್ ಗಳಲ್ಲಿ



Rate this content
Log in