ಧನ್ಯವಾದಗಳು ಪೂಜ್ಯರಾದ ಸದ್ಗುರುಗಳೇ(ಶಿಕ್ಷಕರೇ)
ಧನ್ಯವಾದಗಳು ಪೂಜ್ಯರಾದ ಸದ್ಗುರುಗಳೇ(ಶಿಕ್ಷಕರೇ)
1 min
372
ನಾನೊಂದು ಏನೂ ಅರಿಯದ
ಕಲ್ಲಾಗಿದ್ದೆ ವಿದ್ಯೆಯೆಂಬ ಜ್ಞಾನವ ನೀಡಿ
ಸುಂದರ ಶಿಲ್ಪವನ್ನಾಗಿಸಿದಿರಿ ನನ್ನನ್ನು
ನೀವು, ನಿಮಗೆ ನನ್ನ ನೂರು ಧನ್ಯವಾದಗಳು
ನಾನೊಂದು ಏನೂ ಅರಿಯದ
ಅಲ್ಪಮತಿಯಾಗಿದ್ದೆ ಬುದ್ಧಿಯೆಂಬ
ಸುಜ್ಞಾನವ ನೀಡಿ ಸುಕವಿಯನ್ನಾಗಿಸಿದಿರಿ ನನ್ನನ್ನು
ನೀವು, ನಿಮಗೆ ನನ್ನ ಸಾವಿರ ಧನ್ಯವಾದಗಳು
ನಾನೊಂದು ಏನೂ ಅರಿಯದ
ಅಂಧಕಾರದೊಳಿದ್ದೆ ಸಕಲ ವಿದ್ಯೆಯ ವಿದ್ವತ್ತನ್ನು
ನೀಡಿ, ಬೆಳಕೆಂಬ ಜ್ಞಾನದ ದೀವಿಗೆಯ ಕರದೊಳಿಟ್ಟು
ಅಜ್ಞಾನಿಯಾದವಳ ಅಭಿಜ್ಞೆಯನ್ನಾಗಿಸಿದಿರಿ ನನ್ನನ್ನು
ನೀವು, ಪೂಜ್ಯರಾದ ಶಿಕ್ಷಕರೇ ನಿಮಗೆ ನನ್ನ
ಅನಂತ ಕೋಟಿ ಧನ್ಯವಾದಗಳು .
