STORYMIRROR

Gireesh pm Giree

Children Stories Others Children

2  

Gireesh pm Giree

Children Stories Others Children

ದೇವರ ಪ್ರತಿರೂಪ

ದೇವರ ಪ್ರತಿರೂಪ

1 min
101

ಧರೆಯಲ್ಲಿನ ದೇವರ ಸ್ವರೂಪ ಮುದ್ದು ಚಿನ್ನರು

ಆಟ ತುಂಟಾಟ ಹುಡುಗಾಟವೇ ಸುಮಾರು

ನಗುವಲ್ಲಿಯೇ ಮೋಡಿ ಮಾಡುವ ಜಾದುಗಾರ

ಎಲ್ಲರ ಆನಂದದ ಕಡಲಲ್ಲಿ ತೇಲುವಂತೆ ಮಾಡುವ ಸೊಗಸುಗಾರ


ಅಮ್ಮನ ಅಕ್ಕರೆ ಎಂಬ ಸಕ್ಕರೆ ಪ್ರೀತಿ ಮಗುವಿಗೆ ಆಸರೆ

ಅಪ್ಪ ಅಜ್ಜಿ ತಂದ ಉಡುಗರೆಯ ಕಂಡು ಮೊಗದಲ್ಲಿ ಹರ್ಷಧಾರೆ

ಇದ ನೋಡುವ ಕಣ್ಣುಗಳಿಗೆ ಹಬ್ಬದ ರಸಧಾರೆ

ನಾಚಿತು ಮನಸೋತ್ತಿತು ಮಗುವಿನ ನಗೆಗೆ ಆಗಸದ ದ್ರುವತಾರೆ


ಪುಟ್ಟ ಪುಟ್ಟ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು

ದ್ವೇಷ ಅಸೂಯೆ ಬಲುದೂರ ಬಿಟ್ಟು

ಪ್ರೀತಿಯೆಂಬ ಹೂಗಿಡವ ಮನದಲ್ಲಿ ನೆಟ್ಟು

ಇದುವೇ ಆ ಮುಗ್ಧ ಮಗುವಿನ ಯಶಸ್ಸಿನ ಗುಟ್ಟು


ಕಂದಾ ನೀನೆಂದು ಹತ್ತಿರ ನನ್ನ ಹತ್ತಿರ 

ನಿನ್ನೊಳಗಿನ ದೇವರ ಸ್ವರೂಪ ಸದಾ ಹೊಳೆಯೋ ದಿನಕರ

ಮುಗ್ಧತೆ ಸಹನೆಯ ಪ್ರತ್ಯುತ್ತರ

ಜಗವೇ ನಿನ್ನ ಕಂಡು ಬೆರಗಾಗಲಿ ಮುದ್ದು ಬಂಗಾರ


Rate this content
Log in