ಡಬ್ಬಿ ಗಡಿಗೆ
ಡಬ್ಬಿ ಗಡಿಗೆ

1 min

22.3K
ಅಮ್ಮಾನ ಚಹಾ ಡಬ್ಬಿಯಿಂದ
ತಂದ ಒಂದು ರೂಪಾಯಿ,
ಅಪ್ಪನ ಪ್ಯಾಂಟ್ ಜೇಬಿನಿಂದ
ಕದ್ದ ಹತ್ತು ರೂಪಾಯಿ,
ಅಜ್ಜಿಯು ಪ್ರೀತಿಯಿಂದ ಕೊಟ್ಟ
ಹತ್ತು ರೂಪಾಯಿ,
ಅಜ್ಜನಾ ಕಾಳಜಿಯಿಂದ ಬಂದ
ಐದು ರೂಪಾಯಿ,
ಎಲ್ಲವೂ ಸೇರಿತ್ತು ಡಬ್ಬಿಗಡಿಗೆಯಲ್ಲಿ.
ಹೊಸ ಸೈಕಲ್ ಒಂದನ್ನು ನೋಡಿ
ಬರಿದಾಗಿತ್ತು ಅದೇ ಡಬ್ಬಿಗಡಿಗೆಯೂ ಇಲ್ಲಿ.
ಕೈ ಸೇರಿತ್ತು ಹೊಸ ಸೈಕಲ್ ನನ್ನಲ್ಲಿ.
ಖುಷಿಯೂ ಮನದಲ್ಲಿ.