ಚಂದಿರ
ಚಂದಿರ
1 min
138
ದಿನವೆಲ್ಲ ಸುತ್ತಿದ ರವಿಗೆ ವಿದಾಯ
ಆಗಸದಲ್ಲಿ ಮೂಡಿತು ಮುಸ್ಸಂಜೆ ಸಮಯ
ನಗುವ ಚಂದಿರ ಬರುವ ಬಳಿಗೆ
ಅವ ಆಗಸದ ಎತ್ತರಕ್ಕೆ ಹಾರುವ ಗಳಿಗೆ
ಬಾನಂಗಳದಲ್ಲಿ ಹೊಳೆವ ಚಂದಿರ
ನಗುವ ಶಶಿಯ ನೋಡುವ ಕಾತುರ
ಬೆಳದಿಂಗಳಿನಲ್ಲಿ ಹೊಳೆವ ಅಂಬರ
ನೋಡಲು ಕಣ್ಣಿಗೆ ಬಲು ಸುಂದರ
ಆಗಸದಲ್ಲಿ ಪಳ ಪಳ ಹೊಳೆಯುವೆ
ನಕ್ಷತ್ರಗಳ ಎಡೆಯಲ್ಲಿ ಮಿನುಗುವೆ
ಸಂತಸವ ಹೊತ್ತು ತರುವೆ
ಮುಂಜಾನೆ ಆದರೆ ಮರೆಯಾಗುವೆ
ಆಗಸದಲ್ಲಿ ನಿನ್ನಿಂದ ಹಾಲಿನ ಅಲೆ
ಧರಿಸಿರುವೆ ನೀನು ನಕ್ಷತ್ರ ಮಾಲೆ
ಬೆಳಗುವೆ ನೀನು ಆಗಸದಲ್ಲಿ ರಾತ್ರೆ
ಅದು ನೋಡುಗರ ಕಣ್ಣಿಗೆ ಬೆಳದಿಂಗಳ ಜಾತ್ರೆ
