STORYMIRROR

ರಂಗನಾಥ ಈ

Others

2  

ರಂಗನಾಥ ಈ

Others

ಬರುವೆಯಾ ಗೆಳತಿ...?

ಬರುವೆಯಾ ಗೆಳತಿ...?

1 min
246


ಬಿಡದೆ ಹಿಡಿದಿಹ ಜಡಿಮಳೆ

ನಿನ್ನ ನೆನಪುಗಳದೇ ಸುರಿಮಳೆ

ಮಳೆ ನಿಂತೀತು! ನಿನ್ನ ನೆನಪು ?


ಕೊಡೆ ಹಿಡಿದು ನಡೆವಾಸೆ

ನಡೆ ನಡೆದು ದಣಿವಾಸೆ 

ಬರುವೆಯಾ ಗೆಳತಿ ಮಳೆ ನಿಲ್ಲುವಾ ಮುನ್ನ?


ಬಹುದೂರ ನಡೆದಿಹೆನು ಒಬ್ಬಂಟಿಯಾಗಿ

ನಿನ್ನ ನೆನಪುಗಳ ಜೊತೆ ಜಂಟಿಯಾಗಿ

ಕಾತರದಿ ಕಾದಿಹೆನು ಒಂಟಿಕಲ್ಲಡಿ ನಿಂತು

ಬರುವೆಯಾ ಗೆಳತಿ ಕಲ್ಲು ಕರಗುವ ಮುನ್ನ ?


      


Rate this content
Log in