ಬಣ್ಣದ ಬದುಕು
ಬಣ್ಣದ ಬದುಕು

1 min

12K
ಬಂದು ಹಚ್ಚುವೆಯಾ ಓ ಗೆಳೆಯ,
ಬೊಗಸೆಯಲ್ಲಿ ಇಡಿದಿರುವೆ ಬಣ್ಣ.
ಕಾಣಲಿಲ್ಲವೇ ಓ ಇನಿಯಾ,
ನಿದ್ದೆ ಬಂದರು ಬಿಟ್ಟಿರುವೆ ಕಣ್ಣ.
ಕನಸಲ್ಲಿ ನನ್ನ ಜೊತೆ ಸೇರಿ
ಆಡುವೆ ಬಣ್ಣದ ಓಕುಳಿ
ಎದುರಲ್ಲಿ ಬರಬಾರದೇ, ಜೊತೆಸೇರಿ
ಹಾಕುವ ನಾವು ವರ್ಣ ರಂಜಿತಾ ರಂಗೋಲಿ.
ಕಾಮನಬಿಲ್ಲಿಗೆ ಏಳು ಬಣ್ಣ
ಜೊತೆಯಲ್ಲೇ ಸೇರಬೇಕು.
ನಾನು ಖುಷಿಯಾಗಿರಲು
ನೀನು ನನ್ನ ಜೊತೆಯಲ್ಲೇ ಇರಬೇಕು.
ಬಣ್ಣದ ಬದುಕಲ್ಲಿ ಬಾಳುವ
ನಾವು ಈ ಸ್ವರ್ಗದಲ್ಲಿ.