STORYMIRROR

ಶಿವಲೀಲಾ ಹುಣಸಗಿ

Others

3  

ಶಿವಲೀಲಾ ಹುಣಸಗಿ

Others

ಬದುಕಿನ ಬಣ್ಣಗಳು

ಬದುಕಿನ ಬಣ್ಣಗಳು

1 min
50

                                                          

ಹಣೆಯ ಮೇಲೊಂದು ಮುತ್ತ ಹನಿ ನೀರು

ಕೊಂಚ ಜಾರಿದರೂ ವ್ಯರ್ಥವಾದಂತೆ.

ಎದೆಯೊಳು ಬಚ್ಚಿಟ್ಟು ಪೊರೆದಷ್ಟು

ಆಗಸದ ತುಂಬ ತಾರೆಗಳು ನಸುನಗುತ್ತವೆ


ಮಳೆಯ ತುಂತುರು ನಾದದಲಿ ಮೈ ಮರೆತೂ

ಜಾರಿ ಕರಗಿದ ಪ್ರತಿ ಹನಿಗಳಿಗೂ 

ಪ್ರಕೃತಿಯ ಮಡಿಲಲಿ ಭೇದಭಾವಗಳಿಲ್ಲ

ಹೆತ್ತ ಕರುಳಿಗೆ ಜೀವವೆಂದೂ ಹೊರೆಯಲ್ಲ


ಸಂಬಂಧಗಳ ಸರಮಾಲೆಯಲ್ಲಿ ಗರಿಗೆದರಿ

ಬೀರಿದ ಮೊಗ್ಗುಗಳು ನಾವೆಲ್ಲರೂ

ರಕ್ಷಣೆಯ ಹೊಣೆ ಹೊತ್ತವರು ನಾವುಗಳು

ಗಂಡಿರಲಿ,ಹೆಣ್ಣಿರಲಿ ರಕ್ಷಾ ಮಂತ್ರವಿರಲಿ


ಬಣ್ಣದ ಬದುಕಿನ ಸ್ವರೂಪದ ಬಿಂಬ ನಾವು

ಅಣ್ಣ,ಅಕ್ಕ,ತಂಗಿ,ತಮ್ಮರ ಪ್ರತಿರೂಪಗಳು

ಬದುಕಿನೂದ್ದಕ್ಕೂ ಸಾಗುವ ರೇಖೆಗಳು

ದಾರಗುಂಟ ಮರೆಯಾಗದ ಜೀವಗಳು


ಕತ್ತರಿಸದಿರಿ ಬಾಂಧವ್ಯದ ಚಿಗುರುಗಳ

ನೊಸಲಿಗೆ ಗೀಚಿಲ್ಲ ಮಡಿಗೋಡೆಯ

ಸೌಹಾರ್ದ ಪಂದ್ಯದಲ್ಲಿ ಗೆಲ್ಲುವ ಹಯವಾಗೋಣ

ಶರಗಳಿಗೆ ಶಿರ ನೀಡದೇ ಕೂಡಿಬಾಳೋಣ


ಬದುಕಿನ ಬಣ್ಣದ ಕಾಮನಬಿಲ್ಲ ಸೃಷ್ಟಿಸೋಣ.

ರಕ್ಷಾ ಬಂಧನದ ಮರ್ಮವ ಅರಿಯೋಣ

ಪ್ರಕೃತಿಯ ಸಂಸ್ಕಾರ ಅಪ್ಪಿ ನಡೆಯೋಣ....



Rate this content
Log in