ಬದಲಾದ ಬದುಕು
ಬದಲಾದ ಬದುಕು
1 min
11.7K
ಅಂದು ಮನೆಯಲ್ಲಿತ್ತು ಲ್ಯಾಂಡ್ಲೈನ್,
ಎಲ್ಲಾರು ಜೊತೆಯಲ್ಲಿದ್ದರು ಫೈನ್ ಫೈನ್.
ಇಂದು ಕೈಯಲ್ಲಿರುವುದು ಮೊಬೈಲ್,
ಎಲ್ಲಾರು ಇರುವರು ಫಾರ್ ಫಾರ್.
ಅಂದು ಎಲ್ಲರನ್ನೂ ಸೇರಿಸಿ
ಮಾತನಾಡಿಸುತಿತ್ತು ಲ್ಯಾಂಡ್ಲೈನ್,
ಇಂದು ಎಲ್ಲರನ್ನೂ ಬೇರೆ ಬೇರೆ
ಮಾಡುತಿದ್ದೆ ಮೊಬೈಲ್.
ಅಂತರವ ಹೆಚ್ಚಿಸಿ, ಆಂತರ್ಯವ ಮರೆಸಿ...
ಅಟ್ಟಹಾಸವ ಮೆರೆದಿದೆ ಮೊಬೈಲ್,
ಮೂಲೆಗುಂಪಾಗಿದೆ ಲ್ಯಾಂಡ್ಲೈನ್.
