ಅಂದು- ಇಂದು
ಅಂದು- ಇಂದು


-
ಅಂದು ಮದುವೆ ಸುಲಭ
ವಿಚ್ಛೇದನ ಕಷ್ಟ ಅಂತಿದ್ರು
ಇಂದು ವಿಚ್ಛೇದನ ಸಲೀಸು
ಮದುವೇನೆ ಕಷ್ಟ ಅಂತಾರೆ
ಅಂದು ಮಕ್ಕಳು
ತಂದೆ ತಾಯಿಗೆ ಹೆದರುತ್ತಿದ್ದರು
ಇಂದು ತಂದೆ ತಾಯಿ
ಮಕ್ಕಳಿಗೆ ಹೆದರುತ್ತಾರೆ
ಅಂದು ಎಲ್ಲರೂ
ಮಕ್ಕಳು ಬೇಕು ಅಂತಿದ್ರು
ಇಂದು ಮಕ್ಕಳೆಂದರೆ
ಭವಿಷ್ಯ ನಿರಾಸೆ ಅಂತಾರೆ
ಅಂದು ಮಕ್ಕಳು ಹೆಚ್ಚಾದ್ರೆ
ಅದೇ ಆಸ್ತಿ ಅಂತಿದ್ರು
ಇಂದು ಮೂರು ಅಂದರೆ
ಅಯ್ಯೋ ಹೌದಾ ಅಂತಾರೆ
ಅಂದು ಸುಖ ಜೀವನಕ್ಕೆ
ನೆರೆಹೊರೆ ಕಾರಣ ಅಂತಿದ್ರು
ಇಂದು ಅವರಿಂದಲೇ ನಮ್ಮ
ಸ್ವಾತಂತ್ರ್ಯಹರಣ ಅಂತಾರೆ
ಅಂದು ಹಳ್ಳಿಗರು ಕೆಲಸಕ್ಕಾಗಿ
ನಗರಗಳಿಗೆ ಹೋಗ್ತಿದ್ರು
ಇಂದು ನಗರ ವಾಸಿಗಳು
ನೆಮ್ಮದಿ ಇಲ್ಲಾ ಅಂತಾರೆ
ಅಂದು ಶಕ್ತಿಬೇಕು ಅಂತ
ಹೆಚ್ಚು ಊಟ ಮಾಡ್ತಿದ್ರು
ಇಂದು ಹಸಿವಾದರೂ
ಕೊಲೆಸ್ಟ್ರಾಲು ಕೊಬ್ಬು ಅಂತಾರೆ
ಅಂದು ದಪ್ಪವಾಗಿದ್ದರೆ
ಸುಖವಾಗಿದ್ದಾರೆ ಅಂತಿದ್ರು
ಇಂದು ದಪ್ಪವಾಗಿದ್ರೆ
ಏನೋ ಖಾಯಿಲೆ ಅಂತಾರೆ
ಅಂದು ಸಾಹುಕಾರನಾದರೂ
ಬಡವನಂತೆಯೇ ಇರುತ್ತಿದ್ದರು
ಇಂದು ಬಡವನಾದರೂ
ಸಾಹುಕಾರನಂತೆ ನಟಿಸ್ತಾರೆ
ಅಂದು ಒಬ್ಬರ ಸಂಪಾದನೆ
ಉಳಿದವರು ಮನೆ ಕೆಲಸ ಮಾಡ್ತಿದ್ರು
ಇಂದು ಮನೆಯವರಿಗೆಲ್ಲ ಸಂಪಾದನೆ
ಮಕ್ಕಳ ಸಾಕೋದೆ ಕಷ್ಟ ಅಂತಾರೆ