STORYMIRROR

Pushpa Prasad

Children Stories Classics Others

4  

Pushpa Prasad

Children Stories Classics Others

ಅಮ್ಮಾ

ಅಮ್ಮಾ

1 min
9

ಅಮ್ಮಾ ನಿನ್ನ ಮಡಿಲಲಿ

ನಾ ಹಾಯಾಗಿ ಮಲಗಿರಲು

ಬೇರಾವ ಭಯವೂ ನನ್ನ ಕಾಡದು!!


ಕಂದಾ ನಿನ್ನ ನಾ ನಿನ್ನ ತಬ್ಬಿರಲು 

ನನ್ನನ್ನೇ ನಾ ಮರೆತಿರಲು

ಬೇರಾವ ಚಿಂತೆಯೂ ಬಾರದು!!


ಅಮ್ಮಾ ನಿನ್ನ ತೋಳಲಿ

ಬೆಚ್ಚಗೆ ನಾ ಮಲಗಿರಲು

ಎಂದೆಂದಿಗೂ ಸುರಕ್ಷಿತ ನನ್ನೀ ಬಾಳು!!


ಕಂದಾ ನಿನ್ನ ನಾ ಕಾಯುತಿರಲು 

ಈ ಹೃದಯ ನಿನಗಾಗಿ ಮಿಡಿಯುತಿರಲು

ನನ್ನೀಡಿ ಜೀವನವನ್ನೇ ಮುಡಿಪಾಗಿಡುವೆನು!!


ಅಮ್ಮಾ ನಿನ್ನ ಸುಪ್ಪತ್ತಿಗೆಯಲಿ

ನಾ ಸೋಂಪಾಗಿ ಬೆಳೆದಿರಲು

ಎಂದೆಂದೂ ಹಸಿವು ಸುಳಿಯದು!!


ಕಂದಾ ನಿನ್ನ ನಾ ಮುದ್ದು ಮಾಡುತ್ತಿರಲು

ನಿನ್ನಂದಕ್ಕೆ ನಾ ದೃಷ್ಟಿ ಬೊಟ್ಟನ್ನಿಡಲು

ನಿನಗೆ ಯಾವುದೇ ರೀತಿಯ ದೃಷ್ಟಿ ತಾಗದು!!


Rate this content
Log in