ಅಳಲು
ಅಳಲು
1 min
97
ಕಾಡಲ್ಲಿ ಮೇಡಲ್ಲಿ ಹಾಯಾಗಿರುವೆ
ಆದರೀ ಮಾನವರ ಉಪಟಳದಿಂದ ಬೇಸತ್ತಿರುವೆ
ಅವರ ಪಾಪ ಕೃತ್ಯ ನಮಗೆಲ್ಲಾ ಶಾಪ
ದಯೆಯಿಲ್ಲದವರಿಗೆ ದೇವ ನೀನೇ ಕೊಡು ಶಾಪ
ಕಾಡೆಂಬ ನಮ್ಮ ಸುಂದರ ಮನೆಯನ್ನೇ ಕೆಡಹುವರು,
ನಮಗಿಲ್ಲಿ ಆಹಾರ ಇಲ್ಲದಂತೆ ಮಾಡಿಹರು
ಅವರಾಸೆಗೆ ನಮ್ಮ ಆಶ್ರಯವೇಕೆ ಕೊಡುವೆ ನೀ
ದೇವನೇ ಆದರೂ ನೀನು ಏತಕೆ ಆಗಿರುವೆ ಮೌನಿ
ಏ ಮಾನವ ನೀ ಹಾಯಾಗಿದ್ದರೆ ಸಾಕೇ
ನನ್ನನ್ನು ನಿನ್ನಂತೆ ಬದುಕಲು ಬಿಡುವುದಿಲ್ಲ ಏಕೆ?
ನಿನ್ನ ಸ್ವಾರ್ಥಕ್ಕೆ ನಲುಗಿದೆ ನಮ್ಮ ಕುಲ
ನಿನ್ನ ಈ ಕೃತ್ಯದಿಂದ ಆಗಲಿದೆ ಕೋಲಾಹಲ
