ಐಟಿ ಕತೆ- ವ್ಯಥೆ
ಐಟಿ ಕತೆ- ವ್ಯಥೆ


ಕೂತು ಕೂತು ಬೇಜಾರಾದ್ರೆ
ಕುಡಿಯೋ ಕಾಫಿ ಬರೀ ನೀರಾದ್ರೆ !
ತಿಂದಿದ್ದೆಲ್ಲ ಅರಗದೆ ಇದ್ರೆ
ನಾವೇನ್ಮಾಡೋಣ ?
ನೋಡಿ ನೋಡಿ ಕಣ್ಣು ನೋವು
ಕೂತು ಕೂತು ಬೆನ್ನು ನೋವು
ಓಡೋಣಾಂದ್ರೆ ಮಂಡಿ ನೋವು
ನಾವೇನ್ಮಾಡೋಣ ?
ಸಕ್ಕರೆ ಇಲ್ಲದ ಜ್ಯೂಸು ಕುಡುದ್ರು
ಎಣ್ಣೆ ಇಲ್ಲದ ಊಟ ತಿಂದ್ರು
ಸಕ್ಕರೆ ಬಿಪಿ ನಮ್ಗೆ ಬಂದ್ರೆ!
ನಾವೇನ್ಮಾಡೋಣ ?
ತಿಂಗಳಿಗೊಮ್ಮೆ ಸಂಬಳ ಬಂದ್ರೆ
ಅದಕ್ಕಿಂತ ಜಾಸ್ತಿ ಇಎಂಐ ಬಂದ್ರೆ
ತಿಂಗಳ ಕೊನೇಲಿ ನಮ್ ಕಷ್ಟಾನ
ಯಾರಿಗೇಳೋಣ?
ಅಂತೂ ಇಂತೂ ಅಪ್ರೈಸಲ್ ಬಂತು
ವರ್ಷ ಪೂರ್ತಿ ಕಂತೂ ಕಂತು
ಕೊಟ್ಟಿದ್ ನೋಡಿ ಕಣ್ಣೀರು ಬಂತು!
ಎಲ್ಲೋಗಳೋಣ ?
ವೀಕೆಂಡ್ ಬಂದ್ರೆ ಔಟಿಂಗ್
ಅಂತೆ!
ಫೋಟೊ ತೆಗೆದು ಸ್ಟೇಟಸ್ ಅಂತೆ!
ಹ್ಯಾಷ್ಟ್ಯಾಗ್ ಅಲ್ಲೆ ಜೀವನ ಅಂತೆ!
ನಾವೇನ್ಮಾಡೋಣ ?
ಬಿಎಂಟಿಸಿ ಟಿಕೇಟ್ ಆಯ್ತು
ಆಫೀಸ್ ತುಂಬಾ ಬಕೆಟ್ ಆಯ್ತು
ಕೊನೆಗೆ ನಮ್ಗೆ ಚೊಂಬೆ ಸಿಕ್ತು!
ನಾವೇನ್ಮಾಡೋಣ ?
ಒಂಭತ್ತು ಗಂಟೆ ಆಫೀಸಿಗೆ ಕೊಟ್ರೆ
ಎರಡ್ಮೂರು ಗಂಟೆ ಟ್ರಾಫಿಕ್ ಗೆ ಕೊಟ್ರೆ!
ಇನ್ಮೂರು ಗಂಟೆ ಮೊಬೈಲಿಗೆ ಕೊಟ್ರೆ
ಉಳಿಯೊ ಒಂಭತ್ತು ಗಂಟೆಯಲ್ಲಿ
ನಾವೇನ್ಮಾಡೋಣ ?
ಇಲ್ಲೇ ಇದ್ರೆ ಆಫ್ಶೋರ್ ಅಂತೆ
ಅಲ್ಲಿಗೋದ್ರೆ ಆನ್ಶೋರ್ ಅಂತೆ
ಬೇಜಾರಾದ್ರೆ ಬಿಯರ್ ಅಂತೆ !
ನಾವೇನ್ಮಾಡೋಣ ?
ಬೆಳಗ್ಗೆ ಎದ್ರೆ ಲಾಗಿನ್ ಚಿಂತೆ
ರಾತ್ರಿ ಆದ್ರೆ ಲಾಗೌಟ್ ಚಿಂತೆ
ಇದರ ಮಧ್ಯೆ ಅಂತೆ-ಕಂತೆ
ನಾವೇನ್ಮಾಡೋಣ ?