Gireesh pm Giree

Children Stories

1  

Gireesh pm Giree

Children Stories

ಸಾಧನೆ

ಸಾಧನೆ

1 min
141


ಒಂದು ಊರಿನಲ್ಲಿ ರಾಮು ಎಂಬ ಹುಡುಗನಿದ್ದನು. ಅವನಿಗೆ ಓದು ಎಂದರೆ ಬಲು ಇಷ್ಟ ಆದರೆ ತಾನು ಎಂದು ಓದುತ್ತಿರಲಿಲ್ಲ. ಆತ ತನ್ನ ನೋವನ್ನು ಸಹ ಮಿತ್ರರಲ್ಲಿ ಹೇಳಿದರೂ ಅವರು ನಕ್ಕು ಸುಮ್ಮನಾಗುತ್ತಿದ್ದರು . ಓದುವ ಮನಸ್ಸು ಅವನಿಗಿರಲಿಲ್ಲ ಆದರೆ ಓದಬೇಕೆಂಬ ಆಸೆ ಅವನಲ್ಲಿತ್ತು. ಹೀಗಿರಲೊಂದು ದಿನ ಕಣ್ಣೀರು ಸುರಿಸುತ್ತಾ ನದಿಯ ಬಳಿಗೆ ಬಂದು ಜೋರಾಗಿ ಅಳತೊಡಗಿದ.ಈ ವಿದ್ಯಾದೇವಿ ಸರಸ್ವತಿ ನೀನೇಕೆ ನನಗೆ ಒಲಿಯುವುದಿಲ್ಲ. ಈಗಿನ ಕಾಲದಲ್ಲಿ ಬದುಕುವುದು ಸುಲಭವೆಂದು ದೇವರಿಗೆ ಶಪಿಸ ತೊಡಗಿದ .


ಇದನ್ನೆಲ್ಲಾ ಕೇಳಿದ ದೇವಿಯು ರಾಮು ಇದ್ದಲ್ಲಿಯೇ ಪ್ರತ್ಯಕ್ಷಳಾದಳು ರಾಮು ನಿನಗೇನು ಬೇಕು ಎಂದು ಕೇಳಿದಳು. ರಾಮು ತನ್ನ ದುಃಖವನ್ನು ಹೇಳಿಕೊಂಡ.ಆಗ ಮಾತೆಯು ನಿನಗೆ ಓದು ಎಂದರೆ ಇಷ್ಟ ಹೌದು ಆದರೆ ನೀನು ಓದುವ ಪ್ರಯತ್ನ ಆಗಿದ್ದು ಮಾಡಿಲ್ಲ ಮೊದಲು ನೀನು ಆ ಕೆಲಸವನ್ನು ಮಾಡು. ಪ್ರಯತ್ನವೇ ಸಾಧನೆಯ ಮೂಲವೆಂದು ಹೇಳಿ ದೇವಿಯು ದೇವಲೋಕಕ್ಕೆ ಹೋದಳು. ರಾಮು ಅಂದಿನಿಂದ ಓದಲು ಶುರು ಮಾಡಿದ.


ಪ್ರಯತ್ನವೇ ಸಾಧನೆಗೆ ಮೂಲ


Rate this content
Log in