ನೆನೆಪಿನ ಬುತ್ತಿ
ನೆನೆಪಿನ ಬುತ್ತಿ


ಇದು ಸುಮಾರು ಮೂವತ್ತ್ತೈದು ವರ್ಷಗಳ ಹಿಂದಿನದು. ಖ್ಯಾತ ಗಾಯಕ ದಿವಂಗತ ಮೈಸೂರು ಅನಂತ ಸ್ವಾಮಿ ಮತ್ತು ನಾನು ಒಂದೇ ಸಂಸ್ಥೆಯಲ್ಲಿ ಕೆಲಸಮಾಡುತ್ತಿದ್ದೆವು. ನಮ್ಮಲ್ಲಿ ಒಬ್ಬರು ಮಹಿಳಾ ಟೆಲಿಫೋನ್ ಆಪರೇಟರ್ ಇದ್ದರು. (ಅವರ ಹೆಸರು ಮರೆತಿದ್ದೇನೆ. )ಇವರ ಟೇಬಲ್ ಮೇಲೆ ಎಂಟು ಹತ್ತು ಟಲಿಪೋನ್ ಗಳು ಬಿಡುವಿಲ್ಲದೆ ಒಂದರ ನಂತರ ಒಂದು ಟ್ರಿಣ್ ಟ್ರಿಣ್ ಅಂತ ಶಬ್ದಮಾಡ್ತಾನೆ ಇರತ್ತೆ. ಜೊತೆಗೆ ಕಾಲ್ ಬಂದರೆ ಡಿವಿಷನ್ ಗಳಿಗೆ ಮಾನ್ಯುಯಲ್ ಆಗಿ connect ಮಾಡ್ಬೇಕು. ಜೊತೆಗೆ ಸಂಸ್ಥೆ ಯ director ಫೋನ್ ಬಂದರೆ (red light )ಇದನ್ನೆಲ್ಲ ಬಿಟ್ಟು ತಕ್ಷಣ recieve ಮಾಡಬೇಕು. ಹೀಗೆ ಬಿಡುವಿಲ್ಲದ ಕೆಲಸ. ಅದನ್ನ ನಿಭಾಯಿಸೋಕ್ಕೆ ಆ ಮಹಿಳೆಯಿಂದ ಮಾತ್ರ ಸಾಧ್ಯ ಅನ್ನೋ ಮಾತು ಇತ್ತು.
ಒಂದು ಸಲ ಅವರ ತಂದೆ ಇವರನ್ನ ಕಾಣಲು ಬಂದು ಎದುರಿಗೆ ನಿಂತರೂ ತಲೆ ಎತ್ತಿ ನೋಡದೆ ಕೆಲಸದಲ್ಲಿ ಮಗ್ನರಾಗಿದ್ದರು. ಮಗಳಿಗೆ ತೊಂದರೆ ಆಗುತ್ತೆ ಅಂತ ಮಾತನಾಡಿಸದೆ ನಿಂತೇ ಇದ್ದರು. ಆಗ ಅಕಸ್ಮಾತ್ ಅಲ್ಲಿಗೆ ಮೈಸೂರು ಅನಂತ ಸ್ವಾಮಿಯವರು ಬಂದರು. ಅವರಿಗೆ ಇವರ ತಂದೆ ಪರಿಚಯವಿದ್ದುದರಿಂದ ಮಾತನಾಡಿಸಿದರು. ಆಗ ಅವರಿಗೆ ಮಗಳಿಗಾಗಿ ಹತ್ತು ನಿಮಿಷದಿಂದ ನಿಂತದ್ದರೂ ಮಾತನಾಡಲಾಗದ ವಿಷಯ ತಿಳಿದು ಒಂದು ಉಪಾಯಮಾಡಿದರು. ಪಕ್ಕದ ಸೆಕ್ಯುರಿಟಿ ಆಫೀಸ್ ಗೆ ಅವರನ್ನ ಕರೆದುಕೊಂಡು ಹೋಗಿ ಅಲ್ಲಿಂದ ಫೋನ್ ಮಾಡಿಸಿದರು. ಎಲ್ಲಾ ಕೆಲಸ ಬಿಟ್ಟು ಪಾಪ ಅಲ್ಲಿಗೆ ಓಡಿ ಬಂದರು ಆ ಮಹಿಳೆ. ಸಾರೀ ಅಪ್ಪ ನೊಡಿದ್ರಲ್ಲಾ ನನ್ನ ಕೆಲಸ ಏನ್ಮಾಡೋದು ಅಂತ ಹೇಳಿದ್ರು. ಹತ್ತು ನಿಮಷ ಏನೋ ಖಾಸಗಿ ವಿಷಯ ಮಾತನಾಡಿ ಕಳುಹಿಸಿಕೊಟ್ಟರು.ಇಷ್ಟು ವರ್ಷಗಳಾದರು ಈ ಘಟನೆ ಮರೆಯಲಾಗಿಲ್ಲ.