ಕಾಡೇ ನಾಡಿನ ಸಂಪತ್ತು
ಕಾಡೇ ನಾಡಿನ ಸಂಪತ್ತು
ಒಂದಾನೊಂದು ಊರಿನಲ್ಲಿ ಬೀಮ ಮತ್ತು ಅವರ ಗೆಳೆಯರು ವಾಸವಾಗಿದ್ದರು.ಭೀಮ ಮತ್ತು ಅವರ ಗೆಳೆಯರು ಇದ್ದ ಮರಗಳನ್ನು ಕಡಿದು ನಗರಕ್ಕೆ ಮಾರಿ ಹಣ ಸಂಪಾದಿಸುತ್ತಿದ್ದರು. ಒಂದು ಮರವನ್ನು ಕೂಡ ಬಿಡಲಿಲ್ಲ. ಒಮ್ಮೆ ಆತ ಹಾಗೂ ಗೆಳೆಯರು ದಟ್ಟವಾದ ಅರಣ್ಯವನ್ನು ಪ್ರವೇಶಿಸಿದರು . ಭೀಮ ಮತ್ತು ಅವನ ಗೆಳೆಯರು ಅಲ್ಲಿದ್ದ ಉದ್ದವಾದ ದಪ್ಪವಾದ ಮರದ ಕಡೆಗೆ ದೃಷ್ಟಿ ಹರಿಸಿದರು.ರಾಮ, ಸೋಮ ನೋಡಿ ಬೃಹತ್ತಾದ ಮರ! ಇದನ್ನು ಕಡಿದರೆ ಮನೆಗೆ ಲಕ್ಷ್ಮಿ ಬಂದ ಹಾಗೆ ಎಂದ ಬೀಮ. ಹೌದು ಭೀಮಣ್ಣ ಎಲ್ಲರೂ ಜೋರಾಗಿ ಹೇಳಿದರು; ಎಲ್ಲರೂ ಸೇರಿ ಮರವನ್ನು ಕಡಿಯಲು ಮರಕ್ಕೆ ಕೊಡಲಿ ಏಟ್ಟನ್ನು ಹಾಕಿದರು.
ಆ ಕೊಡಲಿಯೇಟು ಜೋರಾಗಿ ಕೇಳಿಬರುತ್ತಿತ್ತು. ಆಗ ಪ್ರಾಣಿಗಳೆಲ್ಲ ಒಟ್ಟಾಗಿ ಬಂದು ಮಾನವರಿಗೆ ನಿಲ್ಲಿಸಿ ನೀವು ಹೀನ ಕೃತ್ಯ ಎಸಗದಿರಿ. ಪ್ರಕೃತಿಯ ಮೇಲೆ ದಾಳಿ ಮಾಡಬೇಡಿ ನಿಲ್ಲಿಸಿ ಮರಗಳನ್ನು ಕಡಿಯುವುದನ್ನು ನಿಲ್ಲಿಸದಿದ್ದರೆ ನೀವು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದವು . ಪ್ರಾಣಿಗಳ ಯಾವ ಮಾತನ್ನು ಕೇಳದೆ ಭೀಮ ಹಾಗೂ ಗೆಳೆಯರು ಮರವನ್ನು ಕಡಿದು ಸಾಗಿಸಿ ಹೊರಟೇಬಿಟ್ಟರು.
ವಾಸಸ್ಥಳ ನಾಶವಾಗುದರಿಂದ ಪ್ರಾಣಿಗಳು ಬಹಳ ದುಃಖಿತರಾದರು.ದಿನಗಳುರುಳಿದವು ಮಳೆಗಾಲ ಆರಂಭವಾಯಿತು ಪ್ರಾಣಿಗಳು ತಮ್ಮ ವಾಸಸ್ಥಳ ಕ್ಕಾಗಿ ಹುಡುಕಾಡಿದವು. ಕೊನೆಗೆ ಹಳ್ಳಿಯ ಕಡೆಗೆ ಪ್ರಾಣಿಗಳು ತೆರೆದಿದ್ದವು. ಅಲ್ಲಿರುವ ಮನೆಯಲ್ಲವನ್ನು ಪ್ರವೇಶಿಸಿ ನಾಶಮಾಡಿತು, ಹಾಗಾಗಿಭೀಮನಿಗೆ ತನ್ನ ತಪ್ಪಿನ ಅರಿವಾಯಿತು.
ತಪ್ಪು ಮಾಡುವುದು ಸಹಜ ಗುಣ ಅದನ್ನು ತಿದ್ದಿ ನಡೆಯುವುದು ತುಂಬಾ ಒಳ್ಳೆಯ ಗುಣ ನಿಮ್ಮ ತಪ್ಪಿನ ಅರಿವು ನಿಮಗಾಗಿದೆಯೆಂದವು ಪ್ರಾಣಿಗಳು. ತಪ್ಪಿನ ಅರಿವಾದ ಭೀಮಾ ಮತ್ತು ಸಹೋದರರು ಬರಿದಾದ ಕಾಡಿನಲ್ಲಿ ಪುನಹ ಮರಗಿಡಗಳನ್ನು ನೆಟ್ಟು ಬೆಳೆಸಿದರು.
