ಬರಗಾಲ
ಬರಗಾಲ
ಚಿತಾರಿ ಎಂಬ ಕುಗ್ರಾಮದಲ್ಲಿ ತೀವ್ರವಾದ ಬರಗಾಲ ಎದುರಾಯಿತು. ಸಕಲ ಪ್ರಾಣಿಗಳ ಸಂಕುಲಗಳು ಜೀವರಾಶಿಗಳು ನೀರಿಲ್ಲದೆ ಆಹಾಕಾರ ಪಟ್ಟವು. ಮಳೆಬರದೆ ವರ್ಷಗಳೇ ಕಳೆದಿತ್ತು.ಆ ಕ್ಷಣ ಆ ಊರಿನ ನಾಯಕರೇ ಎಲ್ಲರೂ ಸೇರಿ ಒಂದು ತೀರ್ಮಾನಕ್ಕೆ ಬಂದರು. ಆಳವಾದ ಬಾವಿಯ ನೋಡಬೇಕೆಂಬುದಾಗಿ. ಅಲ್ಲೇ ಇದ್ದ ಬಾವಿಯನ್ನು ಮತ್ತಷ್ಟು ಆಳವಾಗಿ ತೋದಿದರು. ನೀರಿನ ಸೆಲೆಯೂ ಪತ್ತೆಯಾಗಲಿಲ್ಲ. ತುಂಬಾನೇ ನಿರಾಸೆಯಾದರೂ ಆದರೆ ಈತನ ಪ್ರಯತ್ನವನ್ನು ಬಿಡಲಿಲ್ಲ. ಮತ್ತಷ್ಟು ಮಗದಷ್ಟು ಗುಂಡಿ ತೋಡುವ ನೀರಿನ ಕಾರಂಜಿ ಚಿಮ್ಮಿತು ಎಲ್ಲರ ಮುಖದಲ್ಲೂ ಸಂತಸ ಮನೆಮಾಡಿತ್ತು. ಬಾವಿಯಲ್ಲಿ ತುಂಬಾ ನೀರು. ಊರ ಮಂದಿಯೆಲ್ಲ ನೀರನ್ನು ತನ್ನ ದಾಹ ತೀರುವಷ್ಟು ಕುಡಿದರು.
ಪ್ರಯತ್ನದ ಫಲದಿಂದ ಸಂತಸ , ಪ್ರಯತ್ನದಿಂದ ಆಪತ್ತನ್ನು ಗೆಲ್ಲಬಹುದು.
