STORYMIRROR

Ranjitha M

Others

4  

Ranjitha M

Others

ಶ್ರಾವಣ ಮಾಸದ ಹಬ್ಬ

ಶ್ರಾವಣ ಮಾಸದ ಹಬ್ಬ

1 min
30

ಶ್ರಾವಣ ಮಾಸದಲಿ ಬರುವ ನಾಗರ 

ಪಂಚಮಿ ಹಬ್ಬಕ್ಕೆ ತವರಿಗೆ

ಅಣ್ಣನು, ತಂಗಿಯನ್ನು ಕರೆಯಬೇಕು


ಶ್ರಾವಣದೊಳು ಬರುವ ಅನವರತವಾದ

ಹಬ್ಬಗಳಿಗೆ ಮನೆಯೊಳಗೆ ದೊಡ್ಡ 

ಸಡಗರವೇ ತುಂಬಿರಬೇಕು

ಶ್ರಾವಣದೊಳು ಬರುವ ರಕ್ಷಾ ಬಂಧನ 


ಹಬ್ಬದೊಳು ತಂಗಿಯು ರಾಖಿಯನ್ನು

ಅಣ್ಣನಿಗೆ ಕಟ್ಟಬೇಕು

ಆರೋಗ್ಯ, ಆಯಸ್ಸು ಕೊಡಲೆಂದು

ಪೂಜೆಯನ್ನು ಮಾಡಿ ದೇವರಲ್ಲಿ

ವರವನ್ನು ಕೇಳಬೇಕು


ಕಷ್ಟಗಳು ಎಷ್ಟೇ ಬರಲಿ

ಅಣ್ಣ, ತಂಗಿಗೆ ರಕ್ಷೆಯಾಗಿರಬೇಕು

ರಕ್ಷಾ ಬಂಧನ ಹಬ್ಬದಿಂದ

ಅಣ್ಣ ತಂಗಿಯ ಭಾಂಧವ್ಯವು ಅಮರವಾಗಬೇಕು.



Rate this content
Log in