ಸ ರಿ ಗ ಮ
ಸ ರಿ ಗ ಮ
1 min
134
ಸ ರಿ ಗ ಮ ಸಪ್ತ ಸ್ವರದ ಸಂಗಮ ಸಂಗೀತ
ಭಾವನೆಗಳ ಪದಗಳ ಮಧುರ ಸಾರ ಸಂಗೀತ
ಕೇಳಲು ಇಂಚರ ಹಾಡಲು ಸುಮಧುರ ಈ ಸಂಗೀತ
ಮನದ ವೇದನೆಯ ತಣಿಸಲು ಬಲ್ಲ ಸಂಗೀತ
ಸಪ್ತ ಸ್ವರದ ಪದಗಳ ಹಾಡಿ ಪಾಡಿ
ನಮ್ಮ ಮಾಡುವರು ಆ ಗಾಯಕರು ಮೋಡಿ
ಏಳು ಬಿಲ್ಲಿನ ಕಾಮನಬಿಲ್ಲಂತೆ ಆ ಸಂಗೀತ ಅಲೆ
ಯಾರಿಗೂ ಸುಲಭವಾಗಿ ಒಲಿಯದು ಈ ಸಂಗೀತ ಕಲೆ
ಸ್ವರ ಮಾಧುರ್ಯದ ಸಂಗೀತ ವಿಸ್ಮಯ
ತನು ವಾಗುವುದು ಅದಕ್ಕೆ ತನ್ಮಯ
ಸಂಗೀತ ಗಾರುಡಿಗನ ಆಲಾಪ ಚಂದ
ಸಂಗೀತವೇ ಒಂಥರಾ ಸುಮಧುರ ಅಂದ
