ನಮ್ಮನೆ ಪುಟ್ಟ ಗಣಪ
ನಮ್ಮನೆ ಪುಟ್ಟ ಗಣಪ
1 min
233
ನಮ್ಮ ಮನೆಯ ಪುಟ್ಟ ಗಣಪ
ಎಂದೆಂದಿಗೂ ನೀನಲ್ಲವೇ ತುಂಟ ಮಗುವೇ!
ಬಾಲ ಗಣಪ ಮಾಡಿದ ಎಲ್ಲಾ ಲೀಲೆಗಳನು
ಮಾಡುವ ಮುದ್ದು ಗಣಪ ನೀನೆ ತಾನೆ!
ಗೌರಮ್ಮನಿಗೆ ಗಣೇಶ ಪ್ರೀತಿಯ ಸುತನಾದರೆ
ನನಗೆ ನೀನಲ್ಲವೇ ಪುಟ್ಟ ಕಣ್ಮಣಿಯೇ
ಎಷ್ಟೇ ತುಂಟಾಟ ಮಾಡಿ ಕಾಡಿಸಿದರೂ
ನನಗೆ ಪುಟ್ಟ ಕೃಷ್ಣನೂ, ಗಣಪನೂ ನೀನೇ!
ಚೇಷ್ಟೆ-ತರಲೆಗಳೊಂದಿಗೆ ಗಣಪನಂತೆ
ಬುದ್ಧಿವಂತನಾಗು ಪುಟ್ಟ ಮಗುವೇ
ಎಲ್ಲರಲ್ಲಿ ಅಡಗಿರುವ ಒಳ್ಳೆಯ ಗುಣಗಳನ್ನಷ್ಟೇ
ಪಡೆದು ಬೆಳಗು ದೀಪದಂತೆಯೇ!
ನೀನೆಷ್ಟೇ ಕಾಡಿಸಿ ಪೀಡಿಸಿದರೂ
ನನ್ನಯ ಬಾಳ ಜ್ಯೋತಿ ನೀನೇ!
ಅದಕೆ ಹೇಳುವುದು ನಮ್ಮ ಪುಟ್ಟ
ತುಂಟನಾದರೂ ಬಲು ಜಾಣನೇ!!
