ಮುಂದೆ ಮುಂದೆ ಸಾಗುತ್ತ...
ಮುಂದೆ ಮುಂದೆ ಸಾಗುತ್ತ...
ನೆನಲಿನ ದೋಣಿಯಲ್ಲಿ ನಾನು
ಮುಂದೆ ಮುಂದೆ ಸಾಗುತ್ತ...
ತಂಗಾಳಿಯನ್ನು ಸವಿಯುತ್ತ...
ಬಾಲ್ಯವನ್ನು ನೆನಪಿಸುತ್ತ...
ಶಾಂತ ಸಾಗರದ ಅಲೆಗಳನ್ನು ಎಣಿಸುತ್ತ...
ಪಯಣವನು ಮುಂದುವರಿಸಿದೆನು!
ಶೀತಲ ಮುಸುಕೆತ್ತಿ, ಖುಷಿಯಿಂದ
ಶಾಲೆಗೆ ಹೊರಟ ದಿವಸ
ಆಡುತ್ತ... ನಗುತ್ತ...
ಕುಳಿತು ಕ್ಲಾಸಿನಲ್ಲಿ
ಅಕ್ಷರ ಕಲಿಯುತ್ತ...
ನಡುವೆ ಮನೆಯನ್ನು
ನೆನೆದು, ಅಳುತ್ತ...
ಸಾಗಿಸಿದೆನು ನನ್ನ ನೆನಪಿನ
ದೋಣಿಯನ್ನು
ಮುಂದೆ... ಮುಂದೆ...
ಅಲೆಗಳ ಮೇಲೆ ಅಲೆಗಳು
ಉರುಳಿದವು.
ದಿವಸಗಳ ಮೇಲೆ ದಿವಸಗಳು!
ಯು.ಕೆ.ಜಿ ಎಂದರೊಮ್ಮೆ,
ಒಮ್ಮೆ ಫರ್ಸ್ಟ್ ಸ್ಟ್ಯಾಂಡರ್ಡ್
ಎಂದರು ಹಿರಿಯರು!
ಅರಿವಿಲ್ಲದೆ,
ಆಟ, ಊಟ, ತುಂಟತನದಲ್ಲಿ
ಕಳೆದವು ದಿನಗಳು.
ಸ್ವರ್ಣ ದಿನಗಳು
ಉರುಳಿದವು.
ಮಜವಾಗಿತ್ತು ಪ್ರಯಾಣ
ಶಾಂತಸಾಗರದಲ್ಲಿ ತೇಲುತ್ತ... ತೇಲುತ್ತ...
ಅಲೆಗಳನ್ನು ದಾಟುತ್ತ... ದಾಟುತ್ತ...
ಕಂಡವರು ಕಂಡರು ಬಿರುಗಾಳಿಯನ್ನು,
ರಸಿಕರು ಮೆಚ್ಚಿದರು ತಂಗಾಳಿಯನ್ನು,
ಎಂದೂ ಕಂಡವನಲ್ಲ ನಾನು ಬಿರುಗಾಳಿಯನ್ನು,
ಸವಿದೇನು ಸೊಗಸು ನೋಟ ಸಂಜೆಯಾದನ್ನು,
ಹಕ್ಕಿಗಳ ಚಿಲಿಪಿಲಿಯನ್ನು ಕೇಳುತ್ತ,
ಸಾಗಿಸಿದೆನು ನನ್ನ ನೆನಪಿನ ದೋಣಿಯನ್ನು,
ಮುಂದೆ... ಮುಂದೆ...