ಮಂದಾರ
ಮಂದಾರ
1 min
103
ಮನದೋಟದ
ಮಹತ್ವಾಕಾಂಕ್ಷೆಯ
ಮಂದಾರವು
ಮಡಿಯದೆ,
ಮಹೋನ್ನತ ಸತ್ವಗಳಿಂದ
ಮಕರಂದ ಭರಿತವಾಗಿ
ಮನೋಹರವಾಗಿ ಬಿರಿದು
ಮರೀಚಿಕೆಯಾಗದೆ
ಮಡಿಲ ಸೇರಿ
ಮಯೂರನಂತೆ ಗರಿ ಬಿಚ್ಚಿ
ಮನವ ತಣಿಸಿತು!!
