ಮಿನುಗುವ ತಾರೆಗಳು
ಮಿನುಗುವ ತಾರೆಗಳು
1 min
164
ಮತ್ತದೇ ಮಬ್ಬಾದ ರಾತ್ರಿ, ಮಾತುಗಳು ತಾರೆಗಳ ಕುರಿತು
ತಾರೆಗಳೊಂದಿಗೆ ಅಮೂಲ್ಯ ಮುತ್ತು ರತ್ನಗಳ ಕುರಿತು
ಮಾತುಗಳಲ್ಲಿ ಕಟ್ಟಿದರು ಭವ್ಯಭವನ ತಾರೆಗಳ ಗೊಂಚಲಿನಲ್ಲಿ
ಮಾತು ಮುಗಿದಂತೆ ಯೋಚಿಸಿದರು ತಮ್ಮ ಜೋಪಡಿಗಳ ಕುರಿತು
ಹಿಂಬದಿಯೂ ಅಂಧಕಾರವಿತ್ತು ಮುಂಬದಿಯೂ ಅಂಧಕಾರವಿತ್ತು
ಆ ಅಂಧಕಾರದಲ್ಲೂ ಮಾತುಗಳು ತಾರೆಗಳ ಕುರಿತು
ತಾರೆಗಳ ಮಾತು, ಮಾತುಗಳಲ್ಲಿ ಮುತ್ತು - ರತ್ನಗಳಂತೆ. ಆದರೆ,
ಅಂಧಕಾರದ ಖಂಡನೆಯಲ್ಲಿ ಯೋಚಿಸಿದರು ತಮ್ಮ ಮಾತುಗಳ ಕುರಿತು
ಈ ಮಿನುಗುವ ಕವನ, ಉರಿಯುವ ಅಭಿಲಾಷೆ ಅಭಿವ್ಯಕ್ತಿಪಡಿಸಿದಂತೆ
ಕಾವ್ಯಸಾಲುಗಳು ಜೀರ್ಣಗೊಳ್ಳದಿದ್ದರೂ, ಮಾತುಗಳು ತಾರೆಗಳ ಕುರಿತು
