ಕುಡಿತ
ಕುಡಿತ
1 min
142
ಕುಡಿತ ಹಾಳುಮಾಡುವುದು ಕಂಡಿತ
ಹೋಗುವುದು ಕೆಡುವುದು ಮನ ಹಿಡಿತ
ಕುಡಿತ ತಂದ ಸಾಲದ ಹೊಡೆತ
ಕೂಡಿಟ್ಟ ಹಣವೆಲ್ಲ ಇದಕ್ಕೆ ಕಡಿತ
ಸಾಲದ ಸುಳಿಯಲ್ಲಿ ಬೀಳುವ ಬಾಳು
ಕೇಳುವವರಾರು ಮನೆಯವರ ಗೋಳು
ದಯಮಾಡಿ ಕುಡಿತದಿಂದ ಮರಳು
ಬಿಡು ಬೇಡ ಕುಡಿತದ ಮರಳು
ಕುಡಿತ ನಿಜವಾಗಿಯೂ ಅದು ಶಾಪ
ಅದು ಆರಿಸುವುದು ಜೀವನದ ದೀಪ
ಬಿಟ್ಟರೆ ಒಳಿತು ಜೀವನ
ಆಗ ಜೀವನವೇ ಪಾವನ
