ಕಣ್ಣೀರ ಕಥೆ
ಕಣ್ಣೀರ ಕಥೆ
1 min
207
ಒಂಟಿ ಹೆಣ್ಣಿನ ಪಾಡು ಕೇಳುವವರಾರು
ಅವಳ ನೋವ ಸಂಕಟವ ಹೇಳುವವರಾರು
ಆಚಾರವಿಲ್ಲದ ವ್ಯಕ್ತಿಗಳಿಂದ ಅತ್ಯಾಚಾರ
ಎಂದು ನಿಲ್ಲುವುದು ಈ ಹಾಳು ಅನಾಚಾರ?
ಮಾನವ ಜನಾಂಗವೇ ತಲೆತಗ್ಗಿಸುವಂತೆ ಮಾಡಿದ ನರಭಕ್ಷಕ
ಮನುಕುಲದ ಸರ್ವನಾಶ ಮಾಡಲೆಂದೇ ಹುಟ್ಟಿದ ಕಾಮುಕ
ಏನು ತಪ್ಪು ಮಾಡದ ಅವಳಿಗೇಕೆ ಶಿಕ್ಷೆ?
ನೀಚ ನಾಯಿಗಳಿಗೆ ಎಂದೂ ಕೊಡಬೇಡಿ ಪ್ರಾಣಭಿಕ್ಷೆ
ಅವರಿಗೇಕೆ ಇಂತಹ ಕೃತ್ಯ ಮಾಡಬೇಕೆಂಬ ಬಯಕೆ
ಅವರೊಳಗೆ ಸತ್ತಿದೆಯೇ ಸುಟ್ಟಿದೆಯೇ ಮಾನವೀಯತೆಯ ಆಯ್ಕೆ
ನಮ್ಮ ಹೆತ್ತ ಹೊತ್ತವಳು ಹೆಣ್ಣಲ್ಲವೆ?
ಯಾಕೆ ಈ ತರ ಹೃದಯ ಕಲ್ಲಾದಂತೆ ವರ್ತಿಸುವೆ?
ಆ ಹೆಣ್ಣ ಮನ ಹೇಗೆ ಬೆಂದಿರಬೇಡ
ಅವಳು ಆ ಕ್ಷಣ ಎಷ್ಟು ನೋವು ತಿಂದಿರ ಬೇಡ
ಆ ಕಟುಕರ ನಡತೆಯಿಂದ ಜಾರಿದಳು ಚಿರನಿದ್ರೆಗೆ
ಮರಳಿ ಎಂದೂ ಬಾರದ ತನ್ನ ಊರಿಗೆ
