STORYMIRROR

Gireesh pm Giree

Others

3  

Gireesh pm Giree

Others

ಕನ್ನಡ

ಕನ್ನಡ

1 min
231


ನಮ್ಮ ಪೊರೆವ ಕರುನಾಡ ತಾಯಿ ಭುವನೇಶ್ವರಿ

ಹಳದಿ ಕುಂಕುಮಾದಿ ಕಂಗೊಳಿಸುವ ಪತಾಕೆಯ ಐಸಿರಿ

ಪಂಪ ರನ್ನ ಪೊನ್ನ ರ ಸಾಹಿತ್ಯ ಕೊಡುಗೆ ಅಪಾರ

ಶರಣರ ವಚನಗಳೇ ಬಾಳಿಗೆ ನಾಡಿಗೆ ಶೃಂಗಾರ

 


ಕವಿರಾಜಮಾರ್ಗದ ಕನ್ನಡನಾಡಿನ ವರ್ಣನೆಯ ಅಲಂಕಾರ

ದಾಸಶ್ರೇಷ್ಟರ ಕೀರ್ತನೆಗಳು ಅನುಮಾನಕ್ಕೆ ಭಕ್ತಿಯ ನವಸಾರ

ಯಕ್ಷಗಾನ ಜಾನಪದ ನೃತ್ಯ ನಾಟ್ಯಗಳ ಪೋಷಿಸಿದ ಶ್ರೀಗಂಧದ ಬೀಡು

ಇದು ಕನ್ನಡಿಗರ ನೆಲೆಯೂರು ಅದುವೇ ನಮ್ಮ ಚಂದದ ಕರುನಾಡು



ನಮ್ಮೆಲ್ಲರ ನಾಡು ಚಿನ್ನದ ಬೀಡು

 ಗಂಧದ ಮೇಡು ಸಾಹಿತ್ಯಗಳ ಗೂಡು

 ಅದುವೇ ನಮ್ಮ ಸುವರ್ಣ ಕರ್ನಾಟಕ

 ಕನ್ನಡಿಗರ ಪಾಲಿನ ನೆಚ್ಚಿನ ನಾಯಕ





Rate this content
Log in