STORYMIRROR

Gireesh pm Giree

Others

3  

Gireesh pm Giree

Others

ಕಾಸರಗೋಡು

ಕಾಸರಗೋಡು

1 min
22


ನನ್ನ ನೆಚ್ಚಿನ ನಾಡು

ಕವಿಗಳ ಮೆಚ್ಚಿನ ಬೀಡು

ಬಹು ಭಾಷೆಗಳ ಗೂಡು

ಅದುವೇ ನಮ್ಮ ಕಾಸರಗೋಡು


ದೇವಾಲಯಗಳ ಶಿಲನ್ಯಾಸ ಸುಂದರ

ಹಕ್ಕಿಗಳ ಸುಪ್ರಭಾತ ವೇ ಶೃಂಗಾರ

ಭಾಷೆಗಳ ಸೋಬಗೇ ಅಲಂಕಾರ

ಇಲ್ಲಿ ಹುಟ್ಟಿದ ಜೀವನವೇ ಬಂಗಾರ


ಯಕ್ಷಗಾನ ಬೊಂಬೆಯಾಟ ಕಲೆಯ ಆಟ

ತೆಯಗಳ ಕಣ್ಮನ ಸೆಳೆವ ನೋಟ

ಹಬ್ಬಗಳಲ್ಲಿ ಸವಿಯುವ ಬಗ್ಗೆ ಬಗ್ಗೆ ಔತಣಕೂಟ

ಕೇರಳ ರಾಜ್ಯದ ಸ್ವರ್ಣ ಕಿರೀಟ


ಶಿವಪ್ಪನಾಯಕನ ಕೋಟೆಯ ಕಳೆ

ಹರಿವಳು ಚಂದದಿ ಚಂದ್ರಗಿರಿ ಹೊಳೆ

ಪೈ, ರೈ ಕವಿಗಳ ಕೃತಿಯ ಸೆಳೆ

ಕಾಸರಗೋಡಿನಲ್ಲಿ ಹುಟ್ಟಿದ ಬಾಳೆ ಹೊಂಬಾಳೆ


Rate this content
Log in