STORYMIRROR

Shyla Shree C

Others

1  

Shyla Shree C

Others

ಜೋಡಿ ಪದಗಳು

ಜೋಡಿ ಪದಗಳು

1 min
6.6K

'ದೇವ್ರು ದಿಂಡ್ರು' ಬೇಡ ಅಂದ್ರೂ ಸರಿ,

ಆದ್ರೆ 'ಕೂಲಿ ನಾಲಿ' ಮಾಡ್ಕೊಂಡು

'ಬಟ್ಟೆ ಬರೇ' ತಂದ್ಕೊಟ್ಟು

'ಸಾಕಿ ಸಲುಹಿ'ದ

'ತಂದೆ ತಾಯಿ'ಗಾದ್ರು

'ನೋವು ಗೀವು' ಕೊಡ್ದಂಗೆ

'ಸುಖ ದುಃಖ'ದಲ್ಲಿ ಜೊತೆಯಾಗಿ

'ಶಾಲೆ ಗೀಲೆ' ಅಂತ ಹೋಗಿ

'ಸಂಧಿ ಗೊಂಧಿ'ಲೀ ಅಲೀದೆ 

'ಆಟ ಪಾಠ'ದಲ್ಲಿ ಮುಂದೆ ಬಂದು

'ಹಗಲು ರಾತ್ರಿ' ದುಡಿದು

'ರೊಕ್ಕ ಗಿಕ್ಕ' ಸಂಪಾದಿಸಿ

'ಮನೆ ಮಠ' ಅಂತ ಮಾಡ್ಕೊಂಡ್ರೆ

ವಯೋಗಾಲದಲ್ಲಿ 'ಹಣ್ಣು ಹಂಪಲು' 

ತಿಂದ್ಕೊಂಡು ಆರಾಮಾಗಿ ಇರ್ಬಹುದು ನೋಡ್ರಿ!!


Rate this content
Log in