ಜನನಿ ಜನ್ಮ ಭೂಮಿಶ್ಚ
ಜನನಿ ಜನ್ಮ ಭೂಮಿಶ್ಚ
ಜನನಿ ಜನ್ಮ ಭೂಮಿಶ್ಚ ಭಾರತದ ಜಯ ನಿಶ್ಚಿತ
ಕೋರೋನ ನಿನ್ನ ಸೋಲು ಇನ್ನು ಖಚಿತ
ಉತ್ತರದಿ ನಿಂತಿಹುದು ಸಿಪಾಯಿ ಹಿಮಾಲಯ
ದಕ್ಷಿಣದಿ ಕಾಯ್ವಳು ನಮ್ಮ ಕುವರಿ ಕನ್ಯಾಕುಮಾರಿ
ಪಶ್ಚಿಮದಿ ಹರಿಯುವಳು ನಿರ್ಮಲದಿ ನರ್ಮದಾ
ಪೂರ್ವದಲಿ ಗೋದಾವರಿ, ಕೃಷ್ಣ, ಕಾವೇರಿ
ಜನನಿ ಜನ್ಮ ಭೂಮಿಶ್ಚ ಭಾರತದ ಜಯ ನಿಶ್ಚಿತ
ಕೋರೋನ ನಿನ್ನ ಸೋಲು ಇನ್ನು ಖಚಿತ
ವಾಲ್ಮೀಕಿ, ವ್ಯಾಸ ಮುನಿಗಳು ಜನಿಸಿದ ಪುಣ್ಯ ಸ್ಥಳ
ಅಶೋಕ, ಮೌರ್ಯ, ಅಕ್ಬರಾಳಿದ ವೀರ ಭೂಮಿ
ಝಾನ್ಸಿ ರಝಿಯಾ, ಲಕ್ಷ್ಮಿ ಬಾಯಿಯರ ಪುಣ್ಯ ಭೂಮಿ
ಭಾರತಾಂಬೆಯ ನಾಡಿದು, ವೀರ ವನಿತೆಯರ ಹಾಡಿದು
ಜನನಿ ಜನ್ಮ ಭೂಮಿಶ್ಚ ಭಾರತದ ಜಯ ನಿಶ್ಚಿತ
ಕೋರೋನ ನಿನ್ನ ಸೋಲು ಇನ್ನು ಖಚಿತ
ಆಂಗ್ಲರನ್ನು ಓಡಿಸಿ, ಸ್ವಾತಂತ್ರ್ಯ ತಂದ ಬಾಪೂಜಿ
ನಿಮ್ಮ ಕನಸ ನನಸ ಮಾಡಲು ಹೊರಟ್ವಿ ನಾವ್ ಗಾಂಧೀಜಿ
ವಿಶ್ವದೆಲ್ಲೆಡೆ ಭಾರತದ ಹಿರಿಮೆ ಸಾರಿದರು ಮೋಧೀಜಿ
ಭರತ ಖಂಡ ವಿಶ್ವದಿ ಶ್ರೇಷ್ಠ ಖಂಡ ಎಂದು ಸಾರುತ
ಜನನಿ ಜನ್ಮ ಭೂಮಿಶ್ಚ ಭಾರತದ ಜಯ ನಿಶ್ಚಿತ
ಕೋರೋನ ನಿನ್ನ ಸೋಲು ಇನ್ನು ಖಚಿತ