Exclusive FREE session on RIG VEDA for you, Register now!
Exclusive FREE session on RIG VEDA for you, Register now!

Shiqran Sharfuddin

Others


5.0  

Shiqran Sharfuddin

Others


ಗಜಲ್

ಗಜಲ್

1 min 15 1 min 15

ದೇವತೆಗಳಾಗಲಿ, ಭಕ್ತರಾಗಲಿ ಎಲ್ಲರನ್ನೂ ಇಲ್ಲಿ ಅಸತ್ಯರೆಂದು ಪರಿಣಮಿಸಲಾಗಿದೆ!

ವಿಮರ್ಶಿಸಿ, ಅನುಭವಿಸಿ ಈ ಇಹದ ಬದುಕೇ ಅಸತ್ಯವೆಂದು ಸಾಬೀತುಪಡಿಸಲಾಗಿದೆ!


ಅಭಿಮಾನಿಗಳು ಪರಿಚಯವಿದ್ದೂ ಅಪರಿಚಿತರಂತೆ ವರ್ತಿಸುತ್ತಿರುವುದನ್ನು ಗಮನಿಸಿದರೆ,

ಕಲ್ಲಿನ ಪ್ರತಿಮೆಗಳನ್ನು ಹೊರತುಪಡಿಸಿ, ಉಳಿದೆಲ್ಲವೂ ಅಸತ್ಯವೆಂದು ಪರಿಣಮಿಸಲಾಗಿದೆ!


ಕಲಾವಿದನು- ಕಲ್ಲು ಪ್ರತಿಮೆಯನ್ನು ಕೆತ್ತಿಸಿ, ತನ್ನ ಕಲಾಕೃತಿಗೆ ಮುಗುಳ್ನಗು ನೀಡುವನು;

ತನ್ನದೇ ಕೃತಿಯನ್ನು ಪ್ರದರ್ಶಿಸುತ್ತಾ, ಕಲಾವಿದ ಅದು ಅಸತ್ಯವೆಂದು ಸಾಬೀತುಪಡಿಸುವವನು!


ಅವಳ ಆ ಕಾವ್ಯಸಾಲುಗಳು ಸತ್ಯವನು ಸಾಬೀತುಪಡಿಸುತ್ತಿರುವುದನ್ನು ಗಮನಿಸಿ,

ಕಂಡ ಕನಸುಗಳನ್ನು ಹೊರತುಪಡಿಸಿ, ಉಳಿದೆಲ್ಲವೂ ಅಸತ್ಯವೆಂದು ಪರಿಣಮಿಸಲಾಗಿದೆ!Rate this content
Log in