ದೇವರ ನಾಡ ಚೆಂದ
ದೇವರ ನಾಡ ಚೆಂದ
1 min
77
ನನ್ನ ನಾಡು ಕೇರಳ
ಇಲ್ಲಿ ತೆಂಗು ಹೇರಳ
ಉಡುಪು ಮಾತು ಸರಳ ಮಾತೃಭಾಷೆ ಮಲೆಯಾಳ
ಸಾಗರ ಉದ್ದಕ್ಕೂ ಬಾಗಿದೆ ತೆಂಗು
ಹಚ್ಚ ಹಸಿರಿನಿಂದ ಕಂಗೊಳಿಸುವ ಕಂಗು
ಮುಗಿಲು ಮುಟ್ಟುವ ಶಿಖರ
ಅದು ಎಷ್ಟು ಸುಂದರ
ಮನಬಿಚ್ಚಿ ಮಾತನಾಡುವ ಇಲ್ಲಿನ ಜನ
ಶುದ್ಧ ಪರಿಶುದ್ಧ ಜನರ ಮನ
ಇಲ್ಲಿ ಹುಟ್ಟಿದ ಜೀವನ ಪಾವನ
ದೇವರ ನಾಡಿಗೆ ಇದೋ ನಮನ
ಅರಬಿ ಸಮುದ್ರದ ಗಾಳಿಯ ತಂಪು
ನದಿಗಳು ಸೂರ್ಯನ ಬೆಳಕಿಗೆ ಹೊಳೆಯುವುದು ಕೆಂಪು
ಹಾರಿತು ಅತ್ತ-ಇತ್ತ ಹಕ್ಕಿಯ ಗುಂಪು
ಇದ ನೋಡಲು ಎಷ್ಟೊಂದು ಕಂಪು
