ಭಾರತೀಯರು ನೆನವ ಪುಣ್ಯದಿನ
ಭಾರತೀಯರು ನೆನವ ಪುಣ್ಯದಿನ
1 min
147
ಈ ದಿನ ಸುದಿನ ಸ್ವಾತಂತ್ರ್ಯ ಸಿಕ್ಕ ಚೆಲುವ ದಿನ
ಭಾರತೀಯರೆಲ್ಲರೂ ಸಂಭ್ರಮಿಸುವ ಪುಣ್ಯದಿನ
ಛಲಬಿಡದ ಹೋರಾಟಕ್ಕೆ ಸಿಕ್ಕ ಗೆಲುವೇ ಸ್ವಾತಂತ್ರ್ಯ
ತ್ಯಾಗ ಬಲಿದಾನಕ್ಕೆ ಸಿಕ್ಕ ಫಲವೇ ಸ್ವಾತಂತ್ರ್ಯ
ಭಾರತಾಂಬೆಯ ಮಕ್ಕಳ ದೇಶಪ್ರೇಮದ ಕಿಚ್ಚು
ಬಿಡಿಸಿತು ಬ್ರಿಟಿಷರ ದೇಶ ಆಳುವ ಹುಚ್ಚು
ನಮ್ಮ ಭಾರತ ಎಂಬ ಭಾವನೆಯ ಮನಸ್ಸುಗಳ ಉಗಮ
ಅದು ಪರಕೀಯರ ಆಡಳಿತಕ್ಕೆ ಕೊನೆಗೂ ಹಾಡಿತು ವಿರಾಮ
ಭಾರತಾಂಬೆಯ ಬಿಡುಗಡೆಗೊಳಿಸಿದ ನಮ್ಮ ವೀರರ ನೆನೆಯೋಣ
ಅವರ ಶ್ರೇಷ್ಠ ತ್ಯಾಗ-ಬಲಿದಾನದ ಕಥೆಯ ಅರಿಯೋಣ
ನಮ್ಮವರ ಈ ಅಮೂಲ್ಯ ಕೊಡುಗೆಯ ಗೌರವಿಸೋಣ
ನಮ್ಮವರಿಗಾಗಿ ಈದಿನ ನಮಿಸೋಣ ಅವರ ಸ್ಮರಿಸೋಣ
ಗಿರೀಶ್ ಪಿಎಂ
ವಿವಿ ಕಾಲೇಜು ಮಂಗಳೂರು
