ಅವ್ವ
ಅವ್ವ

1 min

109
ನಿಂದಿಸದೆ, ನನ್ನೆಲ್ಲಾ ನೋವ ನಂದಿಸುವಳು
ಬತ್ತಿದ ಮನದೊಳು ಚೈತನ್ಯವ ತುಂಬುವಳು
ಮಂಕಾದ ಮೆದುಳಿಗೆ ಚುರುಕು ಮುಟ್ಟಿಸುವಳು
ಗೆದ್ದಾಗ, ಅಕ್ಕರೆಯಿಂದ ಸಕ್ಕರೆ ತಿನಿಸಿ ಹಿಗ್ಗುವಳು
ಸೋತಾಗ, ಸಿಡುಕದೆ ಹುರಿದುಂಬಿಸುವಳು
ಬದುಕೆಂಬ ಸಾಗರದ ನುರಿತ ನಾವಿಕಳು
ಅವಳ ಮನಸ್ಸೇ ಮಮತೆಯ ಆಗರವು
ಅವಳ ಒಲವು ಅಜರಾಮರವು!