ಅಪರೂಪದ ಕೊಡುಗೆ
ಅಪರೂಪದ ಕೊಡುಗೆ
1 min
106
ಭಾರತಕ್ಕೆ ಸಿಕ್ಕ ಪೂರ್ವಪದ ಕೊಡುಗೆ
ಅದುವೇ ಅಮೂಲ್ಯ ಸಂವಿಧಾನವು ನಮಗೆ
ವರ್ಷಗಳ ಸಂಶೋಧನೆಯ ಹೂವು ಹಣ್ಣಾಯಿತು
ಭರತಭೂಮಿಗೆ ಪ್ರಜಾಪ್ರಭುತ್ವದ ಬೆಳಕಾಯಿತು
ಕಾನೂನಿನ ಮುಂದೆ ಎಲ್ಲರೂ ಸಮಾನ ಎಂದು ಸಾರಿತು
ಶೋಷಣೆಯ ವಿರುದ್ಧ ನೊಂದವರ ಬಾಳಿಗೆ ಉಸಿರಾಯಿತು
ಮಾನವನ ಹಕ್ಕುಗಳ ಬೋಧನೆಯ ಮಾಡಿತು
ದೇಶದಲ್ಲಿಯೇ ರಾಜ ಸ್ಥಾನವ ಪಡೆದುಕೊಂಡಿತ್ತು
ಈ ದಿನ ಸ್ಮರಿಸೋಣ ಸಂವಿಧಾನ ಶಿಲ್ಪಿಗಳನು
ಅನುದಿನ ನೆನೆಯೋಣ ಅಂಬೇಡ್ಕರ್ ರನು
ನಮ್ಮ ಸಂವಿಧಾನ ನಮ್ಮ ಹೆಮ್ಮೆ
ಮಾಸದು, ಹೊಳಪು ಕಳೆದುಕೊಳ್ಳದ ಹಿರಿಮೆ
