ಅನುಕರಣಾವ್ಯಯ
ಅನುಕರಣಾವ್ಯಯ
1 min
858
'ಪಿಳಿ ಪಿಳಿ' ಕಣ್ಣ ಬಿಡುತ
'ಮಿರ ಮಿರ' ಮಿಂಚವ ಮೂಗುತಿ ಹಾಕಿ
'ಸರ ಸರ' ಹಾವಂತೆ ಸರಿಯುತ
'ಜಿಗಿ ಜಿಗಿ' ಮೊಲದಂತೆ ಜಿಗಿಯುತ
'ಜಿಟಿ ಜಿಟಿ' ಮಳೆಯಲಿ
'ಗುಡು ಗುಡು' ಗುಡುಗು ಸದ್ದಲಿ
'ಚಪ ಚಪ' ಬಾಯಿ ಚಪ್ಪರಿಸುತ್ತಾ
'ಘಮ ಘಮ' ಶುಂಠಿ ಕಾಫಿಯ ಹೀರುತ
'ಚುರು ಚುರು' ಮಿರ್ಚಿ ಬಜ್ಜಿಯ ಸವಿಯುತ
'ದಡ ದಡ' ಆದ ಬಾಗಿಲ ಸದ್ದಿಗೆ
'ದಬ ದಬ' ಎದ್ದು ಬಿದ್ದು
'ಪಟ ಪಟ' ಬಾಗಿಲ ಬಳಿ ಬಂದು
'ಡವ ಡವ' ಎದೆಯ ಬಡಿತದಲಿ
'ಸುಯ್ಯನೆ' ತೆರೆದ ಕದವ ನೋಡಿ
'ಬಿರ ಬಿರ' ನಡೆದು ಬಂದು ಕೋಣೆ ಸೇರಿದೆ