ಐತಿಹ್ಯ ಗಾನ
ಐತಿಹ್ಯ ಗಾನ
ಅಳಲೆಕಾಯಿ ಪಂಡೀತರನ್ನು ಕಂಡವರು ತಲೆಯಲ್ಲೇ ಎಂದೂ ಮರೆಯಲಿಲ್ಲ
ಆ ಕಣ್ಣಿಗೆ ಮಣ್ಣೆರೆಚುವವರಲ್ಲಿ 'ಮಾನವ'ರ್ಯಾರೆಂದು ಕಾಣಸಿಗುತ್ತಿರಲಿಲ್ಲ...
ನನ್ನನ್ನು ಇರಿದ ಅವರ ನಗ್ನ ಕಠಾರಿ ಅಂದು ಸಿಕ್ಕರೂ ಕೂಡ;
ಅವರನ್ನು ಪ್ರಶ್ನಿಸುವವರಿರಲಿಲ್ಲ, ನನ್ನನ್ನು ಸಂತೈಸುವವರಿರಲಿಲ್ಲ...
ಅಂಗಿ ಒದ್ದೆಯಾಗಿತ್ತು, ಸ್ರವಿಸುತ್ತಿರುವ ಗಾಯಗಳಿಂದ;
ನೊಂದ ಕಣ್ಣಿನಿಂದ ಬಿದ್ದ ಹನಿಯೂ ರಕ್ತವಲ್ಲದೇ ಮತ್ತೇನಲ್ಲ...
ಗಿಡುಗಗಳು ಹಾರಿದವು ಶಿಖರ ಚುಂಬಿಸಲು. ಆದರೆ,
ಪ್ರತಿಭಟಿಸಿದ ಘರ್ಜನೆಯಲ್ಲಿ ಅಪಾಯವಿತ್ತು; ಕೆಚ್ಚು ಧೈರ್ಯವಿರಲಿಲ್ಲ...
ಸೂರ್ಯೋದಯವಾಗುವುದು ಕಗ್ಗತ್ತಲಿರುಳು ತೊಡೆದ ಬಳಿಕ,
ನುಸುಕು ದಿವ್ಯ ಬೆಳಕು ಹರಡಿಸುವುದು. ಎಂದೂ ಕತ್ತಲಲ್ಲ...
ಆರಿದ ನಂದಾದೀಪವನು ಪೌರುಷ ಶೂರತ್ವ ಮತ್ತೆ ಬೆಳಗಿಸಿಯೇ ತೋರಿಸಿತು!
ಪರರ ಗೋರಿ ಅಗಿದವರೇ, ಅದರೊಳಗೆ ಚಿರನಿದ್ರೆ ಮಲಗಿದರು. ನಾನಂತೂ ಅಲ್ಲ...
ನನ್ನದೊಂದು ಗಜ ಭೂಮಿ ನಿಷ್ಟುರಿಗಳು ಕಬಳಿಸಿದರೇನು ಮಹಾ?
ಸೋಮ-ತಾರೆಗಳಾಚೆಯೂ ಬ್ರಹ್ಮಾಂಡವಿದೆ; ಈ ಭೂಮಿಯೊಂದೇ ಅಲ್ಲ...